ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ: ಸಚಿವ ಸ್ಥಾನದ ವಿಸ್ತರಣೆ ಅಥವಾ ಪುನರ್ ರಚನೆಯ ಗೊಂದಲದ ನಡುವೆಯೇ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಎಮ್ ಟಿ ಬಿ ನಾಗರಾಜ್, ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಆದರೆ ನನಗೆ ಕೊಳಗೇರಿ ನಿಗಮ ಮಂಡಳಿ ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಕೊಡಬಹುದು ಎಂದು ಇನ್ನೂ ಕೂಡಾ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಸೇರಿದ ಹಿನ್ನೆಲೆಯಲ್ಲಿ ಮಹೇಶ್ ಕುಮಠಳ್ಳಿ ಅವರಿಗೆ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ನಾವು ಬಿಜೆಪಿಗೆ ಬರುವಾಗ ಹದಿನೇಳು ಜನರ ಟೀಮ್ ಇತ್ತು ಈಗ ಎಲ್ಲ ಬಿಜೆಪಿ ಟೀಮ್. ಹನ್ನೊಂದು ಜನರಿಗೆ ಸಚಿವ ಸ್ಥಾನ ಕೊಟ್ಟಾಗ, ನನ್ನನ್ನು ಸಚಿವನಾಗಿಸುವ ಭರವಸೆ ಕೊಟ್ಟಿದ್ದರು ಆದರೆ ಯಾವ ತೊಂದರೆ ಇದೆಯೋ ಗೊತ್ತಿಲ್ಲ. ನಾನು ಕೂಡ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದ್ದೇನೆ ಎಂದರು.
ಪಕ್ಷದ ವರಿಷ್ಠರೂ ಕೂಡ ಭರವಸೆ ಕೊಟ್ಟಿದ್ದಾರೆ.
ಜವಾಬ್ದಾರಿ ಇರುವ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಬಹುತೇಕ ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದರು.