ವಿಜಯಸಾಕ್ಷಿ ಸುದ್ದಿ, ತುಮಕೂರು: ಗ್ರಾ.ಪಂನ ನೂತನ ಸದಸ್ಯ ಸೋತ ಅಭ್ಯರ್ಥಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಗುಂಡಗಲ್ಲು ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ವಾಸಿ ನರಸಪ್ಪ ಎಂಬಾತನ ಮೇಲೆ ಹಲ್ಲೆಯಾಗಿದ್ದು, ನೂತನ ಸದಸ್ಯ ಲಕ್ಷ್ಮೀನಾರಾಯಣ ಹಲ್ಲೆ ಮಾಡಿರುವ ಆರೋಪ ಹೊತ್ತಿದ್ದಾರೆ. ಚುನಾವಣೆಗೂ ಮುನ್ನ ಲಕ್ಷ್ಮೀನಾರಾಯಣಗೆ, ನರಸಪ್ಪ ಹಣವನ್ನು ಸಾಲವಾಗಿ ನೀಡಿದ್ದ.
ಚುನಾವಣೆಯಲ್ಲಿ ಸೋತ ನಂತರ ತನ್ನ ಹಣ ಮರಳಿ ನೀಡುವಂತೆ ಕೇಳಿದ್ದಕ್ಕಾಗಿ ಲಕ್ಷ್ಮೀನಾರಾಯಣ ತನ್ನ ಸ್ನೇಹಿತರಾದ ಗಂಗಪ್ಪ, ನರೇಂದ್ರ ಬಾಬು, ಗಂಗಾಧರಪ್ಪ, ನಾರಾಯಣಪ್ಪ ಅವರೊಂದಿಗೆ ಸೇರಿ ಲಾಂಗು, ಮಚ್ಚು ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.