ಹೆಬ್ಬಾಳ ಗ್ರಾಮದ ಜನತೆಗೆ ಮೂಲಸೌಕರ‍್ಯ ಒದಗಿಸಲು ಕರವೇ ಆಗ್ರಹ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ 
ಶನಿವಾರ ತಾಲೂಕಾ ಕರವೇ ಘಟಕದ ವತಿಯಿಂದ ಹೆಬ್ಬಾಳ ಗ್ರಾಮದ ಸಾರ್ವಜನಿಕರಿಗೆ ಮೂಲಸೌಕರ‍್ಯಗಳನ್ನು ಪೂರೈಸಬೇಕೆಂದು ಗ್ರಾಪಂ ಪಿಡಿಓಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ವಡವಿ, ಹೆಬ್ಬಾಳ ಗ್ರಾಮದಲ್ಲಿ ಅನೇಕ ರಸ್ತೆಗಳು ಹದಗೆಟ್ಟಿದ್ದು, ಇರುವ ಚರಂಡಿಗಳನ್ನು ಸ್ವಚ್ಛಗೊಳಿಸದೇ ಹಾಗೇ ಬಿಟ್ಟಿದ್ದಾರೆ. ಈಗಾಗಲೇ ನೀಡಿರುವ ಆಶ್ರಯ ಮನೆಗಳು ಹಕ್ಕಪತ್ತದಲ್ಲಿರುವ ಅಳತೆಗಳಂತೆ ಫಲಾನುಭವಿಗಳಿಗೆ ನೀಡಬೇಕು. ಆಶ್ರಯ ಪ್ಲಾಟ್‌ನಿಂದ ಹೋಗುವ ಚರಂಡಿಯ ನೀರು ಪಕ್ಕದಲ್ಲಿರುವ ಕೃಷಿ ಭೂಮಿಗೆ ಹೋಗುವುದರಿಂದ ಬೆಳೆ ಹಾಳಾಗಿ ರೈತರಿಗೆ ತೊಂದರೆಯಾಗುತ್ತಿದೆ.
ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ಪೈಪಲೈನ್ ದುರಸ್ತಿಯಾಗಬೇಕು. ಗ್ರಾಪಂ ಪಿಡಿಓ ವಾರದಲ್ಲಿ 3 ದಿನ ಮಾತ್ರ ಕರ್ತವ್ಯಕ್ಕೆ ಬರುತ್ತಿದ್ದು ಖಾಯಂ ಪಿಡಿಓ ನೇಮಕವಾಗಬೇಕು. ಈ ಎಲ್ಲ ಬೇಡಿಕೆಗಳು 7 ದಿನಗಳಲ್ಲಿ ಈಡೇರಬೇಕು ಇಲ್ಲದೇ ಇದ್ದಲ್ಲಿ ಕರವೇ ತಾಲೂಕಾ ಘಟಕದ ವತಿಯಿಂದ ತಾಲೂಕಾ ಪಂಚಾಯತ ಕಚೇರಿ ಮುಂದೆ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here