ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಹೆಸರು ಬೆಂಬಲ ಬೆಲೆ ಕೇಂದ್ರ ಆರಂಭಿಸುವಂತೆ ತಾಲೂಕಿನ ರೈತರು ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಇದಕ್ಕೆ ಸ್ಪಂದಿಸಿದ ಸಚಿವ ಸಿ.ಸಿ. ಪಾಟೀಲ ಸಹಕಾರ ಮಾರಾಟ ಮಂಡಳಿ ಅಧಿಕಾರಿಗಳ ಹಾಗೂ ಸಂಬಂಧಿಸಿದ ಸಚಿವರ ಜೊತೆ ಮಾತನಾಡಿ ಬೆಂಬಲ ಬೆಲೆ ಕೇಂದ್ರವನ್ನು ಆರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣದಲ್ಲಿ ಹೆಸರು ಬೆಂಬಲ ಬೆಲೆ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ ಹೇಳಿದರು.
ರೈತರ ಒಂದು ಖಾತೆಗೆ ನಾಲ್ಕು ಕ್ವಿಂಟಾಲ್ ಹೆಸರು ಎಫ್‌ಎಕ್ಯೂ ಆಧಾರದ ಮೇಲೆ (ಗುಣಾತ್ಮಕತೆ) ಖರೀಧಿಸಲಾಗುವುದು. ಪ್ರತಿ ಕ್ವಿಂಟಾಲ್‌ಗೆ 7196 ರೂ ದರವಿದ್ದು ಮಾರುಕಟ್ಟೆಗಿಂತ ಹೆಚ್ಚಿನ ದರವಿದೆ. ರೈತರು ಇನ್ನಷ್ಟು ಬೆಲೆ ಹೆಚ್ಚಳ ಗೊಳಿಸಲು ಮನವಿ ಮಾಡಿಕೊಂಡಿದ್ದಾರೆ. ಸಚಿವರ ಜೊತೆ ಮತನಾಡಿ ಸರ್ಕಾರದಿಂದ ಬೆಲೆ ಹೆಚ್ಚಳಗೊಳಿಸಲು ಚರ್ಚಿಸಿ ಎಂದು ಮನವಿ ಮಾಡಿಕೊಳ್ಳಲಾಗುವುದು.
ಸೆ. 15 ಕ್ಕೆ ಹೆಸರು ಬೆಂಬಲ ಬೆಲೆ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗಳಿಂದ ಆದೇಶವಾಗಿತ್ತು. ಅ. 15 ರವರೆಗೆ ಹೆಸರು ಉತ್ಪನ್ನ ಮಾರಾಟಗೊಳಿಸುವ ರೈತರ ಹೆಸರು ನೊಂದನೆ ಮಾಢಿಕೊಳ್ಳಲಾಗುವುದು. ನವೆಂಬರ್ 15 ರವರೆಗೆ ಖರೀಧಿ ನಡೆಸಲಾಗುವುದು.
ಸೋಮವಾರದಿಂದ ಖರೀದಿ ಕೇಂದ್ರ ಆರಂಭಗೊಳ್ಳಲಿವೆ. ನರಗುಂದ ಟಿಎಪಿಸಿಎಂಎಸ್ ಹಾಗೂ ಚಿಕ್ಕನರಗುಂದ, ಕೊಣ್ಣೂರ, ಶಿರೋಳ, ಸಂಕದಾಳ, ಹಿರೇಕೊಪ್ಪ ಮತ್ತು ಸುರಕೋಡ ಗ್ರಾಮ ಪ್ರದೇಶದಲ್ಲಿ ತೆರೆಯುವ ಕೇಂದ್ರಗಳಲ್ಲಿ ಹೆಸರು ಖರೀಧಿಸಲಾಗುವುದು ಎಂದು ಹುಡೇದ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಎಪಿಎಂಸಿ ಸದಸ್ಯ ಎನ್.ವಿ. ಮೇಟಿ, ಸಂಭಾಜೀ ಕಾಶೀದ, ಯಲ್ಲಪ್ಪಗೌಡ ಪಾಟೀಲ, ವಿ.ಜಿ. ಹಣ್ಣಿಕೇರಿ, ಎಂ.ಬಿ. ಹಿರೇಮಠ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ, ಕೆಎಸ್‌ಸಿಎಂಎಫ್ ವ್ಯವಸ್ಥಾಪಕ ಸಚೀನ್ ಪಾಟೀಲ, ವಿನೋದ ಚೌರಡ್ಡಿ, ನಿಂಗಪ್ಪ ಕುರಿ, ಎಪಿಎಂಸಿ ಉಪಾಧ್ಯಕ್ಷ ಮಲ್ಲಪ್ಪ ಬೋವಿ, ಸಿ.ಬಿ. ಕರಿಗೌಡ್ರ, ಮಾಬೂಸಾಬ ಕಮ್ಮಾರ, ಕೃಷ್ಣಾಜಿ ಪಾಚಂಗಿ, ಭೀಮಪ್ಪ ಪಾಚಂಗಿ, ಸಿದ್ದಪ್ಪ ಹೊನ್ನನವರ, ಬಸಪ್ಪ ಹುಲಜೋಗಿ ಇನ್ನಿತರರು ಉಪಸ್ಥಿತರಿದ್ದರು.