ವಿಜಯಸಾಕ್ಷಿ ಸುದ್ದಿ, ಗದಗ
ಭಾರತೀಯ ಜನತಾ ಪಕ್ಷ ಅಂದರೆ ಅದು ಮುಸ್ಲಿಂ ವಿರೋಧಿ ಪಕ್ಷ ಎಂಬ ಮಾತಿದೆ. ಇದರ ಮಧ್ಯೆ ಬಿಜೆಪಿ ಸಚಿವರೊಬ್ಬರು ಮಸೀದಿಯಿಂದ ಹೊರಬಂದ ಅಜಾನಗೆ ಗೌರವ ಸಲ್ಲಿಸಿದ ಪ್ರಸಂಗ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಕಳೆದ ಶಿವರಾತ್ರಿ ಅಮವಾಸ್ಯೆ ದಿನದಂದು ಮನೆ ಮನೆಗೆ ನಳ ಸಂಪರ್ಕದ
ಮೂಲಕ ನೀರು ತಲುಪಿಸುವ ಜಲ ಜೀವನ್
ಮಿಷನ್(ಜೆಜೆಎಂ) ಸೇರಿ ಒಟ್ಟು 1.86 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಯೋಜನೆಯ ಉದ್ದೇಶ, ಕಾಮಗಾರಿಗೆ ಡೆಡ್ ಲೈನ್ ಕುರಿತಂತೆ ಮಾತನಾಡುತ್ತಿದ್ದಾಗ, ಪಕ್ಕದ ಮಸೀದೆಯಿಂದ ಅಜಾನ್ ಕೇಳಿದೆ. ತಕ್ಷಣವೇ ಭಾಷಣ ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಸುಮಾರು ಒಂದೂವರೆ ನಿಮಷಗಳ ಕಾಲ್ ನಡೆದ ಅಜಾನ್ ಗೆ ತಮ್ಮ ಭಾಷಣ ಬ್ರೇಕ್ ಹಾಕಿ ಅಜಾನ್ ಮುಗಿಯುತ್ತಿದ್ದಂತೆ ಭಾಷಣ ಆರಂಭಿಸಿದ್ದಾರೆ. ಸಚಿವರ ಈ ನಡೆಗೆ ಗ್ರಾಮಸ್ಥರಾದ ರಾಜು ಪೆಂಡಾರ, ಗಿರೀಶ್ ಮುಕ್ಕಣ್ಣವರ, ಗಣೇಶ ಜಡಿ, ಸಣ್ಣಹೊನಕೇರಪ್ಪ ಕರಿ, ರಿಯಾಜ್ ಡಂಬಳ, ಕಾಶಿಮ್ ಹು ಹರಿವಾಣ, ಹುಸೇನ್ ಬಾಷಾ ಮುಜಾವರ್, ಸಿದ್ಧೀಕ ಪೆಂಡಾರ, ಅಬ್ದುಲ್ ಹಳ್ಳಿ ಸೇರಿದಂತೆ ಇಡೀ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ನಾಂದಿ ಹಾಡಿದೆ.