ವಿಜಯಸಾಕ್ಷಿ ಸುದ್ದಿ, ಜೆರುಸಲೇಂ
ಪ್ಯಾಲೆಸ್ತೀನ್ ಪ್ರದೇಶದಿಂದ ಸ್ಫೋಟಕ ಬಲೂನ್ ಗಲು ಹಾರಿ ಬಂದ ಬೆನ್ನಲ್ಲಿಯೇ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ.
11 ದಿನಗಳ ಕಾಲ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಭಯ ಆವರಿಸಿತ್ತು. ನಂತರ ಮೇ 21ರಂದು ಉಭಯ ದೇಶದವರು ಕದನ ವಿರಾಮ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಯುದ್ಧದ ಭಯ ಆವರಿಸುತ್ತಿದೆ.
ಬೆಂಕಿಯ ಬಲೂನ್ ಗಳು ದಕ್ಷಿಣ ಇಸ್ರೇಲ್ ನ ಸುಮಾರು 20 ಕಡೆ ಬೆಂಕಿ ಬೀಳಲು ಕಾರಣವಾಗಿವೆ ಎಂದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಇಸ್ರೇಲ್ ನಲ್ಲಿ ಬೆಂಜಮಿನ್ ನೆತನ್ಯಾಹು ಸರ್ಕಾರ ಉರುಳಿ ನೆಫ್ಟಾಲಿ ಬೆನ್ನೆಟ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದಾಳಿ ನಡೆದಿದೆ.
ದಕ್ಷಿಣ ಗಾಜಾನಗರದ ಖಾನ್ ಯೂನೆಸ್ ನ ಪೂರ್ವ ಭಾಗ ಗುರಿಯಾಗಿಸಿಕೊಂಡು ಇಸ್ರೇಲ್ ವಾಯುಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ತಿನ್ ಮೂಲಗಳು ತಿಳಿಸಿವೆ.
ಈ ದಾಳಿ ಬಗ್ಗೆ ಪ್ರತ್ರಿಕ್ರಿಯೆ ನೀಡಿದ ಇಸ್ರೇಲ್, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಇದಕ್ಕೆ ಪ್ರತಿಯಾಗಿ ಖಾನ್ ಯೂನೆಸ್ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.