- ನಿರ್ಮಾಪಕ ಎಂ.ಬಿ. ಬಾಬು ವಿರುದ್ಧ ಚಿತ್ರ ವಿತರಕ ಕೇಸ್ ದಾಖಲು
ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ನಟ ಸುದೀಪ್ ನಟನೆಯ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ರಿಲೀಜ್ ವಿವಾದ ತಾರಕಕ್ಕೇರಿದ್ದು, ರಾಂ ಬಾಬು ಪ್ರೊಡಕ್ಷನ್ಸ್ ನಿರ್ಮಾಪಕ ಎಂ.ಬಿ. ಬಾಬು ವಿರುದ್ಧ ವಿತರಕ ಖಾಝಾಪೀರ್
ಚಿತ್ರದುರ್ಗದಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಗ್ರಿಮೆಂಟ್ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2.90 ಲಕ್ಷ ಹಣಕ್ಕೆ ಚಿತ್ರ ನಿರ್ಮಾಪಕರು ಮತ್ತು ವಿತರಕರ ನಡುವೆ ಅಗ್ರಿಮೆಂಟ್ ಆಗಿತ್ತು. ಅಗ್ರಿಮೆಂಟ್ ಬಳಿಕ
ರಾಂ ಬಾಬು ಪ್ರೋಡಕ್ಷನ್ಸ್ ಗೆ 60 ಲಕ್ಷ ಹಣ ನೀಡಿದ್ದೆ. ಮಾ.31 ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ 45 ಲಕ್ಷ RTGS, 5 ಲಕ್ಷ ಕ್ಯಾಶ್, ಬಳಿಕ ಸೆ. 23ಕ್ಕೆ 1 ಲಕ್ಷ, 27 ಕ್ಕೆ 4 ಲಕ್ಷ, ಅಕ್ಟೋಬರ್ 27 ಕ್ಕೆ 5 ಲಕ್ಷ ಸೇರಿ ಒಟ್ಟು 60 ಲಕ್ಷ ರಾಂಬಾಬು ಫಿಲಂಸ್ ಗೆ ಹಣ ನೀಡಿದ್ದೆ.
ಈಗ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆ ಪೊಲೀಸರು 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.