ವಿಜಯಸಾಕ್ಷಿ ಸುದ್ದಿ, ಗದಗ:
Advertisement
ಮೋಹನ ಮಾಳಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರೋಣದ ಬಿಜೆಪಿ ಮುಖಂಡ ಮುತ್ತಣ್ಣ ಲಿಂಗನಗೌಡ್ರ ಆಯ್ಕೆಯಾಗಿದ್ದಾರೆ.
ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದು, ಗದಗ ಜಿಲ್ಲಾಧ್ಯಕ್ಷರಾಗಿ ಮುತ್ತಣ್ಣ ಲಿಂಗನಗೌಡ ಹಾಗೂ ಬೆಳಗಾವಿ ನಗರ ಜಿಲ್ಲಾಧ್ಯಕ್ಷರ ಅನಿಲ ಬೆನಕೆ ಅವರನ್ನು ನೇಮಕ ಮಾಡಿದ್ದಾರೆ.

ಅದೇ ರೀತಿ ಧಾರವಾಡ ಗ್ರಾಮೀಣ ಸಹ ಪ್ರಭಾರಿಗಳಾಗಿ ಮೋಹನ ಮಾಳಶೆಟ್ಟಿ, ಬಳ್ಳಾರಿ ಸಹ ಪ್ರಭಾರಿಯಾಗಿ ವಿರುಪಾಕ್ಷ ಸಿಂಗನಾಳ ನೇಮಕಗೊಂಡಿದ್ದಾರೆ.