ವಿಜಯಸಾಕ್ಷಿ ಸುದ್ದಿ, ಮೈಸೂರು;
ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ. ಜಾತಿ ಜಾತಿಗಳನ್ನೇ ಒಡೆದರು.
ಈಗ ಸಿಂದಗಿ, ಹಾನಗಲ್‌ನಲ್ಲಿ ಜಾತಿವಾರು ಸಭೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇವರು ಜಾತ್ಯತೀತವಾಗಿದ್ದರೆ ಜಾತಿವಾರು ಸಭೆ ಯಾಕೆ ನಡೆಸುತ್ತಿದ್ದರು. ಇವರೆಂಥಾ ಜಾತ್ಯತೀತವಾದಿ ಎಂದು ವಾಗ್ದಾಳಿ ನಡೆಸಿದರು.
ಬ್ರದರ್ ಮುಸಲ್ಮಾನರ ಕತ್ತು ಕೋಯ್ತಾರೆ ಎಂಬ ಜಮೀರ್ ಆರೋಪಕ್ಕೆ ಉತ್ತರಿಸಿದ ಅವರು, ಫಾರೂಕ್‌ರನ್ನು ಚುನಾವಣೆಗೆ ನಿಲ್ಲಿಸಿ ಕತ್ತು ಕೋಯ್ದವರು ಯಾರು. ಫಾರೂಕ್ ಸೋಲಿಸಲು ರಾಮಸ್ವಾಮಿಗೆ ವೋಟು ಹಾಕಿದ್ದು ಯಾರು.
ಇವರಿಂದ ಮುಸಲ್ಮಾನರು ಉದ್ಧಾರ ಆಗಿದ್ದಾರಾ? ಹೋಗಲಿ ರಾಮಸ್ವಾಮಿಯವರನ್ನಾದರೂ ಉಳಿಸಿಕೊಂಡಿದ್ದಾರಾ ? ಇವರಿಂದ ನಾವು ಕಲಿಯಬೇಕಿಲ್ಲ. ಚುನಾವಣೆಯುದ್ದಕ್ಕೂ ಹೀಗೆಯೇ ಮಾತನಾಡಲಿ ನನಗದು ಒಳ್ಳೆಯದು, ನಾನು ಅದನ್ನೇ ಆಶಿಸುತ್ತೇನೆ ಎಂದು ಎಚ್ಡಿಕೆ ಹೇಳಿದರು.