ರೋಣ ಪೊಲೀಸರ ಭರ್ಜರಿ ಬೇಟೆ; ಮೂವರು ಹೈಟೆಕ್ ಕಳ್ಳರ ಬಂಧನ, ಚಿನ್ನಾಭರಣ ವಶ

0
Spread the love

 

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ತಾಲೂಕಿನ ಬೆನಹಾಳ‌ ಗ್ರಾಮದಲ್ಲಿ ಸೆಪ್ಟೆಂಬರ್29ರ ಮಧ್ಯರಾತ್ರಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಆರ್ ದೊಡ್ಡಮನಿ ಅವರ ಮನೆ ದೋಚಿದ್ದ ಮೂವರು ಅಂತರ್ ಜಿಲ್ಲಾ ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಷಾರಾಮಿ ಕಾರಲ್ಲಿ ಬಂದು ಕಳ್ಳತನ ಮಾಡಿದ್ದ ಹೊಸಪೇಟೆಯ ಚಪ್ಪರದಹಳ್ಳಿ ಎಸ್ ಆರ್ ನಗರದ ಬಯಲು ಆಂಜನೇಯ ದೇವಸ್ಥಾನದ ಬಳಿಯ ನಿವಾಸಿ, ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಾಡುವ ಗೋಣಿಬಸಪ್ಪ ಅಲಿಯಾಸ್ ಗೋಣಿ ಬಸವೇಶ್ವರ ತಂದೆ ಸೋಮಪ್ಪ ಬಾರಕೇರ, ದೇವಾಂಗಪೇಟೆಯ ಶಂಕ್ರಮ್ಮನ ಗುಡಿ ಬಳಿಯ ನಿವಾಸಿ ಬಿ ಸಾಗರ್ ತಂದೆ ಹುಲುಗಪ್ಪ ಹಾಗೂ ವೃತ್ತಿಯಲ್ಲಿ ಡ್ರೈವರ್ ಆಗಿರುವ ಐದನೇ ವಾರ್ಡ್ ನ ಹಂಪಿ ಇಂಟರ್‌ನ್ಯಾಷನಲ್ ಹೋಟೆಲ್ ಹತ್ತಿರದ ನಿವಾಸಿ ವೈ. ಲಕ್ಷ್ಮಣ್ಣ ಅಲಿಯಾಸ್ ಲಕ್ಕಿ ತಂದೆ ಟಿ. ಯಲ್ಲಪ್ಪ ಬಂಧಿತರು.

ಬಂಧಿತರಿಂದ ಐದು ಸಾವಿರ ನಗದು ಹಾಗೂ ಮೂರು ಸಾವಿರ ಮೌಲ್ಯದ ಟೈಟನ್ ವಾಚ್ ಬಿಟ್ಟು, ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಆರ್ ದೊಡ್ಡಮನಿ ಅವರ ಮನೆಯಲ್ಲಿ ಕಳ್ಳತನವಾಗಿದ್ದ ಎಲ್ಲಾ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಿದ ಹುಂಡೈ ಕಾರು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗಿದೆ.

ಇದನ್ನೂ ಓದಿ ಬೀಗ ಮುರಿದು ಒಂದೂವರೆ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ದೋಚಿದ ಕಳ್ಳರು

ಎಸ್ಪಿ ಯತೀಶ್ ಎನ್, ಶಂಕರ್ ಎಂ. ರಾಗಿ, ಸಿಪಿಐ ಸುಧೀರಕುಮಾರ್ ಎಂ. ಬೆಂಕಿ ಅವರ ಮಾರ್ಗದರ್ಶನದಲ್ಲಿ, ರೋಣ ಪಿಎಸ್ಐ ವಿನೋದ ಪೂಜಾರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರ್ ತಿಗರಿ, ವೈ. ಎಚ್. ಬೇವಿನಗಿಡದ, ಎಚ್. ಎಸ್. ಶಂಕ್ರಿ, ವಿ.ವೈ. ಹಟ್ಟಿ, ಮುತ್ತಪ್ಪ ಭಾವಿ, ಎಸ್.ಎನ್. ಚಿಮ್ಮನಕಟ್ಟಿ, ಎಸ್.ಪಿ. ಭಗಲಿ, ಎಸ್.ಬಿ. ಗೂಳಪ್ಪನವರ್, ಹನಮಂತಪ್ಪ ಹುಲ್ಲೂರ ಹಾಗೂ ಬೆರಳು ಮುದ್ರೆ ಘಟಕದ ಪಿಎಸ್ಐ ವೈ. ಕೆ. ವಡಗೇರಿ, ಎಎಸ್ಐ ಡಿ.ಎಂ. ಮ್ಯಾಗೇರಿ, ಮುಖ್ಯ ಪೇದೆ ಅಬ್ದುಲ್ ಘನಿ, ಡಿಎಆರ್ ನ ಎಆರ್ ಎಸ್ ಐ ಗುರು ಬೂದಿಹಾಳ, ಸೈಬರ್ ಕ್ರೈಮ್ ನ ಆನಂದ್ ಸಿಂಗ್ ದೊಡ್ಡಮನಿ ಕಾರ್ಯಚರಣೆ ನಡೆಸಿ, ಹೈಟೆಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here