ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜೂಜಾಟ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಎರಡು ಗ್ರಾಮಗಳಲ್ಲಿ ನಡೆದ ಪೊಲೀಸರ ದಾಳಿ. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಗುತ್ತಿಗೆದಾರ, ಚಾಲಕ ಸೇರಿದಂತೆ ಆರು ಜನರನ್ನು ಬಂಧಿಸಿದರೆ, ಪುಟಗಾಂವ ಬಡ್ನಿ ಗ್ರಾಮದಲ್ಲಿ ಬರೋಬ್ಬರಿ 20 ಜನ ಘಟಾನುಘಟಿಗಳನ್ನು ಬಂಧಿಸಲಾಗಿದೆ.
ಸೂರಣಗಿ ಗ್ರಾಮದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುತ್ತಿಗೆದಾರ, ಇಬ್ಬರು ಚಾಲಕರು ಸೇರಿದಂತೆ ಆರು ಜನರನ್ನು ಲಕ್ಷ್ಮೇಶ್ವರ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಸೂರಣಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಜೂಜಾಟದಲ್ಲಿ ತೊಡಗಿದ್ದ ರಫೀಕ್ ಮಾಬುಸಾಬ್ ಕೊಲಕಾರ್, ಬಸವರಾಜ್ ರಾಮಣ್ಣ ಸಂಕ್ಲಿಪುರ, ಅಂದಪ್ಪ ಬಸಪ್ಪ ರೆಡ್ಡಿ, ಮಾರುತಿ ಪಕ್ಕೀರಪ್ಪ ಬಾರ್ಕಿ, ಬಸವರಾಜ್ ಈರಪ್ಪ ಶಿಗ್ಲಿ, ಜಗದೀಶಪ್ಪ ಬಸಪ್ಪ ಶೀರನಹಳ್ಳಿ ಎಂಬುವವರನ್ನು ಬಂಧಿಸಿ ಅವರಿಂದ 4700 ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪುಟಗಾಂವ ಬಡ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 20 ಜನರ ತಂಡದ ಮೇಲೆ ಲಕ್ಷ್ಮೇಶ್ವರ ಪೊಲೀಸರು ದಾಳಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಲಕ್ಷ್ಮೇಶ್ವರ ಠಾಣೆಯ ಪಿಎಸ್ಐ ಡಿ ಪ್ರಕಾಶ್ ಹಾಗೂ ಸಿಬ್ಬಂದಿ ದಾಳಿ ಮಾಡಿದಾಗ ಘಟಾನುಘಟಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ.
ರಮೇಶ್ ಶಿವಪುತ್ರಪ್ಪ ಮರಿಹೊಳಲಣ್ಣವರ್, ಈರಪ್ಪ ಪಂಚಪ್ಪ ಅಂಗಡಿ, ಮಂಜುನಾಥ್ ಮುದಕಪ್ಪ ಚನ್ನೂರು, ಆನಂದ ಶಿವಪುತ್ರಪ್ಪ ಅತ್ತಿಗೇರಿ, ರಾಜು ನಾಗಪ್ಪ ಬಸನಕಟ್ಟಿ, ಅಶೋಕ ಮಹಾಲಿಂಗಪ್ಪ ಚನ್ನೂರು, ಶಿವರಾಜ್ ಚನ್ನಬಸಪ್ಪ ಛಬ್ಬಿ, ಬಸವರಾಜ್ ಹಾಲಪ್ಪ ಬನ್ನಿಕೊಪ್ಪ,
ಹನಮಂತಪ್ಪ ಹೂವಪ್ಪ ಬುಕಿ, ಹನುಮಂತಗೌಡ್ ನೀಲಪ್ಪಗೌಡ ಮುಂದಿನಮನಿ, ಮುತ್ತಪ್ಪ ಶಂಕರಪ್ಪ ಗುಂಜಾಳ, ರುದ್ರಪ್ಪ ಪರಮೇಶಪ್ಪ ಬೂದಿಹಾಳ, ವಸಂತ ತಿಪ್ಪನಗೌಡ ಪಾಟೀಲ, ಮಾನಪ್ಪ ಹನಮಂತಪ್ಪ ಬುಕಿ, ಬಸವರಾಜ್ ರಾಮಪ್ಪ ಕಟ್ಟೆಣ್ಣವರ್, ಮೌನೇಶ್ ನಾಗಪ್ಪ ಅರ್ಕಸಾಲಿ, ಸಿದ್ದರಾಮಪ್ಪ ಪ್ರಕಾಶಪ್ಪ ಚೊತಗಲ್ಲ, ಫಕ್ಕೀರೇಶ್ ಯಲಪ್ಪ ಗೊಜನೂರು, ಶಿವಲಿಂಗಪ್ಪ ಶಿವಪ್ಪ ಯಲವಿಗಿ, ಶಿವಪುತ್ರಪ್ಪ ಬಸವಣ್ಣೆಪ್ಪ ಕೊರಕಣ್ಣವರ್ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ನಗದು 17 ಸಾವಿರದ 600 ಹಣವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.