ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಕ್ಲಬ್ ಆವರಣದಲ್ಲಿ ಸ್ನೇಹಿತರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡು ಪರಸ್ಪರ ಫ್ರೆಂಡ್ಶಿಪ್ ಬ್ಯಾಂಡ್ ಧರಿಸಿ, ಸ್ವತಃ ತಯಾರಿಸಿದ ಶುಭಾಶಯ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಅಧ್ಯಕ್ಷೆ ಮಂಜುಳಾ ಅಕ್ಕಿ ಅವರು ಸ್ನೇಹಿತರ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು. ಸದಸ್ಯೆಯರು ಜೀವನದಲ್ಲಿ ಸ್ನೇಹ ಹಾಗೂ ಬಾಂಧವ್ಯದ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸ್ನೇಹಿತರ ದಿನದ ಅಂಗವಾಗಿ ವಿವಿಧ ಮನರಂಜನಾ ಆಟಗಳು ಹಾಗೂ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಆಟಗಳಲ್ಲಿ ವಿಜೇತರಾದ ವಿದ್ಯಾ ಗಂಜಿಹಾಳ ಹಾಗೂ ಪ್ರೀತಿ ಹೊನಗುಡಿ ಅವರಿಗೆ ಬಹುಮಾನ ವಿತರಿಸಲಾಯಿತು.
ಸ್ನೇಹ, ಸಂತೋಷ ಹಾಗೂ ಒಗ್ಗಟ್ಟಿನ ಸಂದೇಶ ಸಾರಿದ ಕಾರ್ಯಕ್ರಮವು ಸದಸ್ಯೆಯರಲ್ಲಿ ಆತ್ಮೀಯತೆ ಹಾಗೂ ಹೊಸ ಉತ್ಸಾಹ ಮೂಡಿಸಿತು.
ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ, ಕಾರ್ಯದರ್ಶಿ ಪೂಜಾ ಭೂಮಾ ಸೇರಿದಂತೆ ಕ್ಲಬ್ನ ಸದಸ್ಯೆಯರು ಉಪಸ್ಥಿತರಿದ್ದರು.



