ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕ್ವಾರಿಯಲ್ಲಿ ಬ್ಲಾಸ್ಟ್ ಮಾಡಿ ತಮ್ಮ ಸ್ವಂತ ಲಾಭಕ್ಕೋಸ್ಸರ ಕಲ್ಲನ್ನು ಒಡೆದು ತೆಗೆಯುವ ಉದ್ದೇಶದಿಂದ ಜಮೀನೊಂದರ ಶೆಡ್ಡಿನ ಮುಂದೆ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳನ್ನು ಗದಗ ಗ್ರಾಮೀಣ ವೃತ್ತ ಸಿಪಿಐ ಆರ್.ಎಸ್.ಕಪ್ಪತ್ತನವರ ನೇತೃತ್ವದಲ್ಲಿ ಮುಳಗುಂದ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ ಡಿ. ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಸೀತಾಲಹರಿ-ಶಿರಹಟ್ಟಿ ರಸ್ತೆಯ ಪಕ್ಕದ ಸಮೀಪವಿರುವ ಇಟ್ಟುಣಗಿ ಮಾಸ್ತರ ಜಮೀನಿನಲ್ಲಿ ಶೆಡ್ಡಿನ ಮುಂದೆ ಆರೋಪಿತರಾದ ಹನಮಂತಪ್ಪ ತಂದೆ ಬಸವಣ್ಣೆಪ್ಪ ಯರೆವಡ್ಡರ ಮತ್ತು ಮುದಕಪ್ಪ ಅಲಿಯಾಸ್ ಸಣ್ಣತಿರ್ಲಪ್ಪ ತಂದೆ ಯರವಡ್ಡರ ಸಂಬAಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ (ಅನುಮತಿ) ಇಲ್ಲದೇ ಸ್ಪೋಟಕ ವಸ್ತುಗಳನ್ನು ಉಪಯೋಗಿಸಿದ್ದಾರೆ.
3 ಸಾವಿರ ರೂ.ನಷ್ಟು 10 ಕೆಜಿ ತೂಕದ ಅಮೋನಿಯಮ್ ನೈಟ್ರೇಟ್, 6250 ರೂ.ನಷ್ಟು 625 ಎಲೆಕ್ಟಿçಕ್ ಡೆಟೋನೆಟರ ವೈಯರ್, 4280 ರೂ.ನಷ್ಟು 214 ಜಿಲೆಟಿನ್ ಟ್ಯೂಬುಗಳು, ಮೂರು ಮೆಗ್ಗರ್ ಬಾಕ್ಸಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಅನಧಿಕೃತ ವಸ್ತುಗಳನ್ನು ವಶಪಡಿಸಿಕೊಂಡಿರುವ ಮುಳಗುಂದ ಪೊಲೀಸ್ ಠಾಣೆಯ ಗುನ್ನಾ ನಂಬರ 42/2020 ಕಲಂ 5 ಸಹ ಕಲ 9(ಬಿ) ಆಫ್ ಎಕ್ಸಪ್ಲೋಸಿವ್ಸ್ ರೂಲ್ಸ್ 2008 ಹಾಗೂ ಕಲಂ 5 ಎಕ್ಸಪ್ಲೋಸಿವ್ಸ್ ಸಬ್‌ಸ್ಟನ್ಸಸ್ ಯಾಕ್ಟ 1980 ರ ಅಡಿಯಲ್ಲಿ ಪ್ರಕರಣ ದಾಖಲಾಗಿಸಿದೆ. ಒಬ್ಬ ಆರೋಪಿತನಿಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.