ಮೇ ತಿಂಗಳಲ್ಲಿ 100% ಬಿಬಿಎಂಪಿ ಚುನಾವಣೆ ಆಗಲಿದೆ: ಸಚಿವ ರಾಮಲಿಂಗಾ ರೆಡ್ಡಿ

0
Spread the love

ಬೆಂಗಳೂರು: ನನ್ನ ಪ್ರಕಾರ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೇ ತಿಂಗಳಲ್ಲಿ 100% ಬಿಬಿಎಂಪಿ ಚುನಾವಣೆ ಆಗಲಿದೆ.

Advertisement

ಗ್ರೇಟರ್ ಬೆಂಗಳೂರು ಆದರೆ ವಾರ್ಡ್ ಜಾಸ್ತಿ ಆಗಬಹುದು. 2-3 ಪಾಲಿಕೆ ಆಗಬಹುದು. ಈಗಿನ ಬೆಂಗಳೂರನ್ನ ಒಬ್ಬ ಮೇಯರ್, ಕಮಿಷನರ್ ಆಡಳಿತ ಮಾಡಲು ಸಾಧ್ಯವಿಲ್ಲ. ನನ್ನ ಪ್ರಕಾರ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು ಎಂದು ಹೇಳಿದ್ದಾರೆ.

ಇನ್ನೂ ಸ್ಪೀಕರ್‌ಗೆ ಗ್ರೇಟರ್ ಬೆಂಗಳೂರು ವರದಿಯನ್ನು ರಿಜ್ವಾನ್ ಅರ್ಷದ್ ಸಮಿತಿ ಕೊಟ್ಟಿದ್ದಾರೆ. ಬಿಲ್ ಬಗ್ಗೆ ಸದನದಲ್ಲಿ ಚರ್ಚೆ ಆಗಲಿದೆ. ಬಿಜೆಪಿ ಅವರಿಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ವೋಟ್ ಮಾತ್ರ ಬೇಕು. ಹೀಗಾಗಿ ಗ್ರೇಟರ್ ಬೆಂಗಳೂರು ವಿಧೇಯಕ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here