ನಗರಸಭೆ ಕಾಂಗ್ರೆಸ್ ಸದಸ್ಯನ ಅಪಹರಣ

0
Spread the love

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನ.2 ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಪಕ್ಷಗಳೆರೆಡು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.‌
ಇದರ‌ ಬೆನ್ನಲ್ಲೆ ಕಾಂಗ್ರೆಸ್ ಸದಸ್ಯನೊಬ್ಬರನ್ನು ಅ.29ರ ರಾತ್ರಿ ಸಿನಿಮಿಯ ರೀತಿಯಲ್ಲಿ‌ಕಿಡ್ನಾಪ್ ಮಾಡಿದ್ದು, ಬಿಜೆಪಿ ಮುಖಂಡರೆ ಕಿಡ್ನಾಪ್ ಮಾಡಿರುವ ಆರೋಪ‌ ಕೇಳಿ ಬಂದಿದೆ.
ನಗರಸಭೆ 7 ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ಹಿರೇಮಠ ಕಿಡ್ನಾಪ್ ಆದವರು. ರಾತ್ರೊರಾತ್ರಿ ಸದಸ್ಯ ನಾಪತ್ತೆಯಾಗಿದ್ದು, ಆತನನ್ನು ನಾಲ್ಕೈದು ಜನರು ಎಳೆದೊಯ್ಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ‌ ದಾಖಲಾಗಿವೆ. ಕೂಡಲೇ ಪೊಲೀಸ್ ಠಾಣೆಗೆ ಆಗಮಿಸದ ಕೈ ಮುಖಂಡರು ತಮ್ಮ ಸದಸ್ಯನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ನಾಪತ್ತೆಯಾಗಿದ್ದ ಸದಸ್ಯ ಕಾರವಾರದ ಹಳಿಯಾಳ‌ ಪೊಲೀಸ್ ಠಾಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಅಲ್ಲದೇ
ಬಿಜೆಪಿ ಬೆಂಬಲಿತ ಯುವಕರು ಅಪಹರಣ ಮಾಡಿರುವುದು ಬಯಲಾಗಿದೆ.
ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪಹರಣಕಾರರು ನ. 2ವರೆಗೂ ಸದಸ್ಯನನ್ನು ಅಜ್ಞಾತವಾಗಿಲಸು ಸಂಚು ರೂಪಿಸಿದ್ದರೆಂದು ತಿಳಿದು ಬಂದಿದೆ. ಮೂತ್ರ ವಿಸರ್ಜನೆ ನೆಪದಲ್ಲಿ ಕಾರಿನಿಂದ ಕೆಳಗಿಳಿದ ಸದಸ್ಯ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾನೆ. ಅಲ್ಲದೇ ಬೀಟ್ ಪೊಲೀಸರ ನೆರವಿನೊಂದಿಗೆ ಪೊಲೀಸ್ ಠಾಣೆ ಆಶ್ರಯ ಪಡೆದಿದ್ದಾರೆ. ಸದ್ಯ ಗಂಗಾವತಿ ನಗರಠಾಣೆ ಪೊಲೀಸರು ಹಳಿಯಾಳಕ್ಕೆ ತೆರಳಿದ್ದಾರೆ.

Advertisement

Spread the love

LEAVE A REPLY

Please enter your comment!
Please enter your name here