ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗೋಣಿ ಬಸಪ್ಪನ ಗುಡಿ ಮುಂದ ಕುಂತು ಚಕಾಚಕಾ ಎಲೆ ಒಗೆಯುತ್ತಿದ್ದ ಮತ್ತೊಂದು ಐಪಿಎಲ್( ಇಸ್ಪೀಟ್ ಪ್ಲೇಯಿಂಗ್ ಲೋಕಲ್ಸ್) ತಂಡವನ್ನು ಗದಗ ಗ್ರಾಮೀಣ ಪೊಲೀಸರು ಬಂಧಿಸಿ, ಆಟಗಾರ ಮಹಾಶಯರನ್ನು ಸ್ಟೇಷನ್‌ಬೇಲ್ ಬಿಡುಗಡೆ ಮಾಡಿದ್ದಾರೆ.
ಹೊತ್ತುಗೊತ್ತು, ನಿದ್ದಿ-ನೀರಡಿಕೆ ಯಾವುದರ ಪರಿವೆಯೇ ಇಲ್ಲದೆ ಎಲಿ ಎಳೆಯೋದು, ರೊಕ್ಕ ಹಚ್ಚೋದು, ಹಂಗನ ಬೀಡಿನೂ ಹಚ್ಚೋದು. ಆಡಬೇಕಂದ್ರ ಆಡಾಬೇಕು ಅಂತಿದ್ದ ಗದಗ ತಾಲೂಕಿನ ನೀರಲಗಿಯ 11 ಫೇಮಸ್ ಪ್ಲೇಯರ್‌ಗಳ ಅಡ್ಡಾದ ಮೇಲೆ ಪಿಎಸ್‌ಐ ಎಂ.ಜಿ. ಕುಲಕರ್ಣಿಯವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದರು.
‘ಆಟಗಾರರಿಂದ’ 4,450 ರೂ. ವಶಪಡಿಸಿಕೊಂಡು, ಕೆಪಿ ಆ್ಯಕ್ಟ್ 87ರ ಅಡಿ ಕೇಸು ಜಜ್ಜಲಾಗಿದೆ. ಗೋಣಿ ಬಸಪ್ಪನ ಮುಂದನ ಕುಂತ ಆಡಿದ್ರ ಅಂವಾ ಸುಮ್ನ ಬಿಟ್ಟಾನನು? ಶಾಪ ಹಾಕೇ ಬಿಟ್ಟಾನ ಎಂದು ಜನ ಮಾತಾಡುತ್ತಿದ್ದಾರೆ.
ಸಿಕ್ಕಿ ಬಿದ್ದವರ ಪೈಕಿ ಒಬ್ಬಾತ ಪ್ರೈವೇಟ್ ಕಂಪನಿ ನೌಕರನಂತೆ. ಎಲ್ಲ ಆಟಗಾರರು ನೀರಲಗಿಯವರೇ.
‘ಐಪಿಎಲ್’ ಆಟಗಾರರ ಪಟ್ಟಿ
1. ಶಿವನಗೌಡ ನಾಗನಗೌಡ ಹಿರೇಗೌಡ್ರ, 2. ಕಾಶಯ್ಯ ತೋಟಯ್ಯ ಹಿರೇಮಠ, 3. ವೀರನಗೌಡ ಬಸನಗೌಡ ಗೌಡರ್, 4. ಬಸಲಿಂಗಪ್ಪ ಪರಪ್ಪ ಹಾದಿಮನಿ, 5. ಷಣ್ಮುಖಪ್ಪ ಪರಪ್ಪ ಇಬ್ರಾಹಿಂಪುರ, 6. ವಿರುಪಾಕ್ಷಪ್ಪ ಫಕ್ಕೀರಪ್ಪ ನರಗುಂದ, 7. ಬಸವರಾಜ ಶಿವಪ್ಪ ಅಣ್ಣಿಗೇರಿ, 8. ಶಿವಾನಂದಪ್ಪ ಲಕ್ಕಪ್ಪ ವಾಲ್ಮೀಕಿ, 9. ಅಶೋಕ್ ಬಸವಂತಪ್ಪ ಭಾವಿ, 10. ಚಂದ್ರಶೇಖರ್ ನಾಗಪ್ಪ ಮಡಿವಾಳರ್, 11. ಬಸವರಾಜ ಸೋಮಲಿಂಗಪ್ಪ ಬಸಾಪುರ