21.4 C
Gadag
Wednesday, September 27, 2023

ಐವರು ಅಂದರ್-ಬಾಹರ್ ಗಿರಾಕಿಗಳು ಅಂದರ್; ಇದರಲ್ಲೊಬ್ಬ ಪುಣ್ಯಾತ್ಮ ಕಂಪ್ಯೂಟರ್ ಪ್ರೊಫೆಸನಲ್!

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಚಾದಂಗಡಿ ಸಮೀಪಾನೇ ಅಡ್ಡೆ ಹಾಕಿ, ಚಾ ಕುಡಿಯುತ್ತ, ಚೂಡಾ ಮೆಲ್ಲುತ್ತ ಪದ್ದತ್‌ಸರಿ ಅಂದರ್-ಬಾಹರ್ ಆಡುತ್ತಿದ್ದ ಐವರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿ, ಸ್ಟೇಷನ್‌ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಿಂಗಜ್ಜ ಸುಲ್ತಾನಿಯವರ ಚಾದಂಗಡಿ ಸಮೀಪ ಇಸ್ಪೀಟು ಆಡುತ್ತಿದ್ದ ಐವರಲ್ಲಿ 2ನೇ ಆರೋಪಿ ಮಲ್ಲಿಕಾರ್ಜುನ ಗೌಡ ಪಾಟೀಲ್ ಒಬ್ಬನೇ ಅಮರಾಪುರ ಗ್ರಾಮದವನಾಗಿದ್ದು, ಉಳಿದವರು ಹುಲ್ಲೂರು ಗ್ರಾಮದವರು. ಇವರಿಂದ 2,300 ರೂಪಾಯಿ ವಶಪಡಿಸಿಕೊಂಡು ಕೆಪಿ ಆ್ಯಕ್ಟ್ ಅಡಿ ಕೇಸು ದಾಖಲಿಸಲಾಗಿದೆ.

ಐವರಲ್ಲಿ ಮೂವರು ಚಾಲಕರಾಗಿದ್ದರೆ, ಒಂದನೇ ಆರೋಪಿ ಮತ್ತು ತಂಡದ ಲೀಡರ್ ವೀರಭದ್ರಗೌಡ ಪಾಟೀಲ್ ಕಂಪ್ಯೂಟರ್ ಪ್ರೊಫೆಸನಲ್ ಎಂಬುದು ಕುತೂಹಲದ ವಿಷಯವಾಗಿದೆ.
ವೀರಭದ್ರಗೌಡ ಮಲ್ಲಿಕಾರ್ಜುನಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಮೌನೇಶಗೌಡ ಪಾಟೀಲ್, ಮೊಹಮ್ಮದಲಿ ಮೌಲಾಸಾಬ್ ಪಾಟೀಲ್, ಷಣ್ಮುಖರೆಡ್ಡಿ ಕಲ್ಲಪ್ಪ ಕೋಳಿವಾಡ, ರಮೇಶ ಶಂಕ್ರಪ್ಪ ಮೂಕಿ ಎಂಬುವವರೇ ಸಿಕ್ಕಿಬಿದ್ದ ಆರೋಪಿಗಳು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!