ವಿಜಯಸಾಕ್ಷಿ ಸುದ್ದಿ, ಗದಗ: ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದು, ರೋಣ ತಾಲೂಕಿಗೆ ಅನ್ಯಾಯ ಮಾಡದೆ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡರಾದ ಮಹಮ್ಮದ್ ಯೂಸುಫ್ ಇಟಗಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗಾಗಿ ಜಿ.ಎಸ್. ಪಾಟೀಲ ಅವರು ಹಲವು ವರ್ಷಗಳಿಂದ ದುಡಿಯುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜಾಸಾಬ್ ಸಾಂಗ್ಲಿಕರ್, ನಬಿಸಾಬ್ ಕೆಲೂರು, ಬಾವಸಾಬ್ ಬೆಟಗೇರಿ, ಮುರ್ತುಜಾ ಡಾಲಾಯತ್, ಅಬ್ದುಲ್ ರಜಾಕ್ ಕೋಲಕಾರ್, ಇಸ್ಮಾಯಿಲ್ ಹೊರಪೇಟಿ, ಬಸೀರ್ ವಡ್ಡಟ್ಟಿ, ಡಿ.ಎಂ. ಕಾತರಕಿ ಹಾಗೂ ಅಬ್ದುಲ್ ರೆಹಮಾನ್ ಕಲಕೇರಿ ಉಪಸ್ಥಿತರಿದ್ದರು.
‘ಪಕ್ಷಕ್ಕಾಗಿ ಇಡೀ ಕುಟುಂಬ ದುಡಿದಿದೆ’
ಶಿರಹಟ್ಟಿ ತಾಲೂಕಿನ ಕಾಂಗ್ರೆಸ್ ಪಕ್ಷ ಹಾಗೂ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಮುಖಂಡರು ಸಹ ಜಿ.ಎಸ್. ಪಾಟೀಲ ಪರವಾಗಿ ಬೆಂಬಲ ವ್ಯಕ್ತಪಡಿಸಿ, ಅವರ ಇಡೀ ಕುಟುಂಬ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ನಿರಂತರವಾಗಿ ದುಡಿದಿದೆ. ಪಕ್ಷದ ನಿಷ್ಠಾವಂತ ನಾಯಕನಾಗಿರುವ ಅವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಈರಣ್ಣ ಕೋಟಿ ಮಾತನಾಡಿ, ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಈ ಭಾರಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ದಶಮನಿ, ಬಸವರಾಜ ಕಂಬಳಿ, ಚಂದ್ರಶೇಖರ ಮುಂಡವಾಡ, ರವಿ ಘಂಟಿ, ಈರಣ್ಣ, ಗೋವಿಂದ ಬಾಗೇವಾಡಿ, ಅಪ್ಪಣ್ಣ ಪಾಟೀಲ ಹಾಗೂ ಮುತ್ತಣ್ಣ ಮುಂಡವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಜಿ.ಎಸ್. ಪಾಟೀಲ ಅವರು ಕಾಂಗ್ರೆಸ್ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ರೋಣ ತಾಲ್ಲೂಕಿಗೆ ನ್ಯಾಯ ದೊರಕಬೇಕಾದರೆ ಅವರಿಗೆ ಸಚಿವ ಸ್ಥಾನ ನೀಡಬೇಕು.”
ಈರಣ್ಣ ಕೋಟಿ
ಕಾಂಗ್ರೆಸ್ ಪಕ್ಷದ ಮುಖಂಡ



