ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಕೆಟ್ಟ ಸಂಗತಿಗಳ ಕಡೆಗೆ ಗಮನವಹಿಸದೇ ಭವಿಷ್ಯದ ಬಗ್ಗೆ ಗಂಭೀರ ಆಲೋಚನೆ ಮಾಡಬೇಕು ಎಂದು ಪ್ರಗತಿಪರ ಚಿಂತಕ ಇಸ್ಮಾಯಿಲ್ ಎಲಿಗಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವದಲ್ಲಿ ನಡೆದ ಎಸ್‌ಎಫ್‌ಐನ 18ನೇ ತಾಲೂಕು ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯಂತಹ ಮಹಾನ್ ನಾಯಕರು ಸ್ವಾಹಿತಕ್ಕಾಗಿ ಏನನ್ನೂ ನಿರೀಕ್ಷಿಸದೇ ದೇಶಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿ ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಕೇವಲ ಪಠ್ಯ-ಪುಸ್ತಕಕ್ಕೆ ಸೀಮಿತವಾಗದೇ ದಿನನಿತ್ಯ ಸಮಾದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಮತ್ತು ಅವಿದ್ಯಾವಂತರಿಗೆ ಒಳಿತನ್ನು ಮಾಡುವ ಅಭ್ಯಾಸಗಳನ್ನು ರೂಢಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಎಸ್‌ಎಫ್‌ಐನ ರಾಜ್ಯಾಧ್ಯಕ್ಷ ಅಮರೇಶ್ ಮಾತನಾಡಿ, 371(ಜೆ) ಸೌಲಭ್ಯಕ್ಕಾಗಿ ದಶಕಗಳ ಕಾಲ ಈ ಭಾಗದ ಅನೇಕ ಪ್ರಮುಖರು ಶ್ರಮಿಸಿದ್ದಾರೆ. ಅದರ ಬಳಕೆಯನ್ನು ಇಂದಿನ ಯುವಪೀಳಿಗೆಯು ಮಾಡಿಕೊಳ್ಳಬೇಕು ಎಂದರು.
ರವಿ ಅಧಿಕಾರ್, ಎಲ್.ಜಿ. ಸಮಜುನಾಯ್ಕ, ಡಿ. ರಮನವಲಿ, ಶಿವಾರೆಡ್ಡಿ, ಪವನ್ ಕುಮಾರ್, ವೆಂಕಟೇಶ್, ಮಲ್ಲಿಕಾರ್ಜುನ್, ಲೋಕೇಶ್, ಅಶ್ವಿನಿ, ಚೌಡಮ್ಮ, ತೇಜಸ್ವಿನಿ, ಭೂಮಿಕ, ಅಮೂಲ್ಯ ಇತರರು ಭಾಗವಹಿಸಿದ್ದರು.