- ಈ ಬಾರಿ ಡಿಸಿಎಂ ಹುದ್ದೆ ಇಲ್ಲ
- ವಿಜಯೇಂದ್ರಗಿಲ್ಲ ಅವಕಾಶ, ಸುರೇಶಕುಮಾರ, ಅರವಿಂದ ಲಿಂಬಾವಳಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಕೋಕ್
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಬಹುನಿರೀಕ್ಷೆಯಲ್ಲಿದ್ದ ನೂತನ ಸಚಿವ ಸಂಪುಟ ಘೋಷಣೆಯಾಗಿದ್ದು, ಒಟ್ಟು 29 ಜನರು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 8 ಜನ ಲಿಂಗಾಯತರು, 3 ಜನ ದಲಿತರು, 7 ಜನ ಒಬಿಸಿ, ಒಬ್ಬರು ಎಸ್ಟಿ, ಒಬ್ಬರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿದ್ದ 23 ಸಚಿವರು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹಿರಿಯ ಮುಖಂಡರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸುರೇಶಕುಮಾರ್, ಅರವಿಂದ ಲಿಂಬಾವಳಿಗೆ ಕೋಕ್ ನೀಡಲಾಗಿದ್ದು,
ಹೊಸ ಮುಖಗಳಾದ ನವಲಗುಂದ ಶಾಸಕ ಶಂಕರಗೌಡ ಮುನೇನಕೊಪ್ಪ, ಎಸ್. ಅಂಗಾರ, ಅರಗ ಜ್ಞಾನೇಂದ್ರ, ಆಚಾರ, ಸೇರಿ ಆರು ಜನ ಹೊಸಬರಿಗೆ ಅವಕಾಶ ನೀಡಲಾಗಿದೆ.
ಮೂವರು ದಲಿತ, ಒಂದು ಎಸ್ಟಿ, ಎಂಟು ಜನ ಲಿಂಗಾಯತ, ಏಳು ಓಬಿಸಿ ಒಬ್ಬರು ಮಹಿಳೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.



