ಬೆಂಗಳೂರು:- 3 ಕೋಟಿ ವಂಚನೆ ಆರೋಪ ಹಿನ್ನೆಲೆ, ಆನ್ ಲೈನ್ ಗೇಮಿಂಗ್ ಆ್ಯಪ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಆನ್ ಲೈನ್ ಜೂಜಿನ ಆ್ಯಪ್ ಆಗಿರುವ ಪಾಕೇಟ್ 52 ವಿರುದ್ಧ FIR ದಾಖಲಾಗಿದೆ. ನಿಶಾಂತ್ ಶ್ರೀವತ್ಸ ಎಂಬ ವ್ಯಕ್ತಿ, ಜೂಜಿನ ಮೋಜಿಗೆ ಬಿದ್ದು 3 ಕೋಟಿ ಹಣ ಕಳೆದುಕೊಂಡಿದ್ದಾರೆ.
ಸಣ್ಣ ಪುಟ್ಟ ಬೆಟ್ಟಿಂಗ್ ಹಾಕಿದಾಗ ಗೆಲ್ಲಲು ಅನುವು ಮಾಡಿಕೊಡುತ್ತಾರೆ. ದೊಡ್ಡ ಮೊತ್ತದ ಬೆಟ್ಟಿಂಗ್ ಹಾಕಿದ ವೇಳೆ ಸೋಲಿಸುತ್ತಾರೆ. ನಾವು ಆಟವಾಡಿದ ಟೇಬಲ್ ನ ಮಾಹಿತಿ ನೀಡುವುದಿಲ್ಲ. ಈ ಆ್ಯಪ್ ನಲ್ಲಿ ಸಾಕಷ್ಟು ಲೋಪಗಳಿದ್ದು ಯಾವುದೇ ರೀತಿಯ ಸೆಕ್ಯುರಿಟಿ ಇರುವುದಿಲ್ಲ.
ನಮ್ಮ ಹಣವನ್ನು ದುರುಪಯೋಗ ಮಾಡಿಕೊಂಡು ಆ್ಯಪ್ ನಿಂದ ವಂಚನೆಯಾಗಿದೆ ಎಂದು ದೂರಿನಲ್ಲಿ ವ್ಯಕ್ತಿ ಉಲ್ಲೇಖ ಮಾಡಿದ್ದಾರೆ. ಸಾಕಷ್ಟು ಗ್ರಾಹಕರಿಗೆ ಹೀಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪಾಕೇಟ್ 52 ವಿರುದ್ಧ ಸೆಂಟ್ರಲ್ ಸಿಇಎನ್ ನಲ್ಲಿ ಪ್ರಕರಣ ದಾಖಲಾಗಿದೆ.



