ಬೆಂಗಳೂರು: ಬಾಕಿ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಲಾಗಿದೆ. ಇಂದು ಬೆಳಿಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಲ್‌ಗೆ ಭೇಟಿ ನೀಡಿ ಸೀಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಲ್ ಮುಂಭಾಗ ನೂರಾರು ಸಿಬ್ಬಂದಿ ಉಪಸ್ಥಿತರಿದ್ದರು.
ಮಾಲ್ 30.81 ಕೋಟಿ ರೂಪಾಯಿ ಪ್ರಾಪರ್ಟಿ ಟ್ಯಾಕ್ಸ್ ಜಿಬಿಎಗೆ ಪಾವತಿಸಬೇಕಿತ್ತು. ಆದರೆ ತೆರಿಗೆ ಪಾವತಿ ಇಲ್ಲದ ಕಾರಣ, ನೌಕರರು ಬೆಳಿಗ್ಗೆಯಿಂದಲೇ ರೋಡ್‌ನಲ್ಲಿ ನಿಂತು ಕಾಯಬೇಕಾಯಿತು.
ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ ಅಭಿಷೇಕ್ ಡೆವೆಲಪರ್ಸ್ ತಾರಿಗೆ ಅವರ ಒಡೆತನದ್ದಾಗಿದೆ. ಮಾಲ್ ಮಾಲೀಕರಿ ಜಿಬಿಎಗೆ ಕಟ್ಟಬೇಕಾಗಿರುವ ತೆರಿಗೆಯನ್ನ ಸರಿಯಾಗಿ ಪಾವತಿ ಮಾಡಿಲ್ಲ. ಇವ್ರು 30 ಕೋಟಿ 81 ಲಕ್ಷದ 45 ಸಾವಿರದ 600 ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕಾರಣಕ್ಕೆ ಮಂತ್ರಿ ಮಾಲ್‌ಗೆ ಬೀಗ ಹಾಗಿ ಸೀಜ್ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ , “ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಮಾಲ್ ಸೇರಿದ್ದು, ಆಸ್ತಿ ತೆರಿಗೆ ಪಾವತಿಸದ ಕಾರಣ ಸೀಜ್ ಮಾಡಲಾಗಿದೆ. ಹಲವಾರು ಬಾರಿ ನೋಟಿಸ್ ನೀಡಿದ್ದೇವೆ. ಮಂತ್ರಿ ಮಾಲ್ ನಷ್ಟದಲ್ಲಿ ಇರಲಿಕ್ಕಿಲ್ಲ. ನಿಯಮದ ಪ್ರಕಾರ ತೆರಿಗೆ ಪಾವತಿಸಬೇಕು” ಎಂದು ತಿಳಿಸಿದ್ದಾರೆ.


