ಬೆಂಗಳೂರು: ಕಳೆದ 5 ವರ್ಷಗಳಿಂದಲೂ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದಲೂ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ.
2019-20ರಿಂದ 2023-24ವರೆಗೆ ಕೆಎಸ್‌ಆರ್‌ಟಿಸಿ- 1500.34 ಕೋಟಿ ನಷ್ಟ. ಬಿಎಂಟಿಸಿ- 1544.62 ಕೋಟಿ. ಕಲ್ಯಾಣ ಕರ್ನಾಟಕ ಸಾರಿಗೆ- 777.64 ಕೋಟಿ.ವಾಯುವ ವಾಯುವ್ಯ ಕರ್ನಾಟಕ ನಿಗಮ- 1386.58 ಕೋಟಿ ನಷ್ಟದಲ್ಲಿವೆ ಎಂದರು. ಸಾರಿಗೆ ನಿಗಮಗಳು ನಷ್ಟದಲ್ಲಿವೆ.
ಸರ್ಕಾರ ಸಹಕಾರ ಕೊಡದೇ ಹೋದರೆ ಸಾರಿಗೆ ನಿಗಮಗಳಿಗೆ ಕಷ್ಟ ಆಗುತ್ತದೆ. ಇಡೀ ದೇಶದಲ್ಲಿ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಷ್ಟವನ್ನು ತಡೆಯಲು ಬಸ್ ಟಿಕೆಟ್ ದರ ಜಾಸ್ತಿ ಮಾಡಲಾಗಿದೆ. ಸಿಎಂ ಅವರು 2 ಸಾವಿರ ಕೋಟಿ ಲೋನ್ ಕೊಡಿಸಿದ್ದಾರೆ. ಅದನ್ನ ಸರ್ಕಾರ ತೀರಿಸುತ್ತದೆ. ಮೋಟಾರ್ ಟ್ಯಾಕ್ಸ್ ವಿನಾಯ್ತಿ ಸಾರಿಗೆ ಇಲಾಖೆಗೆ ಸರ್ಕಾರ ಕೊಟ್ಟಿದೆ ಎಂದು ತಿಳಿಸಿದರು.



