ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲರು 76ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.
ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ್ ಕಮಾಂಡರ್ ಶಂಕರಗೌಡ ಚೌದ್ರಿ ವಹಿಸಿದ್ದರು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ನೇತೃತ್ವವನ್ನು ವಿಜಯಕುಮಾರ್ ಜಿ ವಹಿಸಿದ್ದರು. ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಗದಗ ಗ್ರಾಮೀಣ ಘಟಕದ ಪಿಎಸ್‌ಐ ಕಿರಣಕುಮಾರ್, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಬಕಾರಿ ದಳದ ನೇತೃತ್ವವನ್ನು ವಿಜಯಲಕ್ಷ್ಮೀ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಜಿ.ಕೆ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಓ ಸಚಿನ್ ಬಿಸನಳ್ಳಿ, ಎನ್.ಸಿ.ಸಿ. ಬಾಯ್ಸ್ ದಳದ ನೇತೃತ್ವವನ್ನು ಹುಲಕೋಟಿಯ ರಾಜರಾಜೇಶ್ವರಿ ಪ್ರೌಢಶಾಲೆಯ ರಿಯಾನ್ ಅಹ್ಮದ್, ಸಾಮಾನ್ಯ ವಿಭಾಗದ ನೇತೃತ್ವವನ್ನು ವಿ.ಡಿ.ಎಸ್.ಟಿ.ಸಿ. ಬಾಲಕಿಯರ ಪ್ರೌಢಶಾಲೆಯ ನೀಲಮ್ಮ, ಭಾರತ ಸೇವಾದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಸ್ನೇಹಾ, ಬೆಟಗೇರಿಯ ಸೇಂಟ್‌ಜಾನ್ ಪ್ರೌಢಶಾಲೆಯ ಸಾಮಾನ್ಯ ವಿಭಾಗದ ನೇತೃತ್ವವನ್ನು ಸೋಮಶೇಖರ, ಮಾಜಿ ಸೈನಿಕರ ತಂಡದ ನೇತೃತ್ವವನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬಸಲಿಂಗಪ್ಪ ಮುಂಡರಗಿ, ಎನ್.ಸಿ.ಸಿ.ಗರ್ಲ್ಸ್ ತಂಡದ ನೇತೃತ್ವವನ್ನು ನಗರದ ಸಿ.ಎಸ್. ಪಾಟೀಲ ಪ್ರೌಢಶಾಲೆಯ ದಿವ್ಯಾ, ಶಾಲೆಯ ಸ್ಕೌಟ್ಸ್ ವಿಭಾಗದ ನೇತೃತ್ವನ್ನು ನಗರದ ಕೆ.ಎಲ್.ಇ. ಸಿ.ಬಿ.ಎಸ್.ಇ ಪ್ರಾಥಮಿಕ ಸಾಯಿ ಸಮರ್ಥ, ಸೇವಾದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ನಗರದ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ಚೈತ್ರಾ, ಸಾಮಾನ್ಯ ತಂಡದ ನೇತೃತ್ವವನ್ನು ನಗರದ ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆಯ ರಜಿಯಾಬೇಗಂ, ಕೆ.ಎಸ್.ಆರ್.ಟಿ.ಸಿ ನೇತೃತ್ವವವನ್ನು ಹುಬ್ಬಳ್ಳಿಯ ವಾ.ಕ.ರ.ಸಾ. ಭಧ್ರತಾ ಹಾಗೂ ಜಾಗೃತದಳದ ಎನ್.ಕೆ. ಲಮಾಣಿ ವಹಿಸಿದ್ದರು. ಪಥ ಸಂಚಲನದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಸಚಿವರು ಸನ್ಮಾನಿಸಿದರು.