
ವಿಜಯಸಾಕ್ಷಿ ಸುದ್ದಿ, ಹಾವೇರಿ : ಮೇ.7ರಂದು ನಡೆದ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ ಶೇ.77.60ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯ ಜೂನ್ 4ರಂದು ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 9,02,119 ಪುರುಷರು, 8,90,572 ಮಹಿಳೆಯರು ಹಾಗೂ 83 ಇತರರು ಸೇರಿದಂತೆ ಒಟ್ಟಾರೆ 17,92,774 ಮತದಾರ ಪೈಕಿ 7,13,613 ಪುರುಷರು, 6,77,577 ಮಹಿಳೆಯರು ಹಾಗೂ 24 ಜನ ಇತರರು ಸೇರಿ 13,91,214 ಮತದಾರರು ಮತ ಚಲಾಯಿಸಿದ್ದಾರೆ.
ಶಿರಹಟ್ಟಿ ಕ್ಷೇತ್ರದಲ್ಲಿ 84,753 ಪುರುಷರು, 81,276 ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,66,031 ಮತದಾರರು, ಗದಗ ಕ್ಷೇತ್ರದಲ್ಲಿ 85,697 ಪುರುಷರು, 84,890 ಮಹಿಳೆಯರು ಹಾಗೂ ಇತರೆ ನಾಲ್ಕು ಜನ ಸೇರಿ 1,70,591 ಮತದಾರರು, ರೋಣ ಕ್ಷೇತ್ರದಲ್ಲಿ 88,625 ಪುರುಷರು, 86,319 ಮಹಿಳೆಯರು ಹಾಗೂ ನಾಲ್ಕು ಜನ ಸೇರಿ 1,74,948 ಮತದಾರರು, ಹಾನಗಲ್ ಕ್ಷೇತ್ರದಲ್ಲಿ 91,945 ಪುರುಷರು, 85,852 ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,77,799 ಮತದಾರರು, ಹಾವೇರಿ ಕ್ಷೇತ್ರದಲ್ಲಿ 95,437 ಪುರುಷರು, 88,812 ಮಹಿಳೆಯರು ಹಾಗೂ ಇತರೆ ಏಳು ಜನ ಸೇರಿ 1,84,256 ಮತದಾರರು, ಬ್ಯಾಡಗಿ ಕ್ಷೇತ್ರದಲ್ಲಿ 90,080 ಪುರುಷರು, 84,264 ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,74,346 ಮತದಾರರು, ಹಿರೇಕೆರೂರು ಕ್ಷೇತ್ರದಲ್ಲಿ 80,299 ಪುರುಷರು, 75,218 ಮಹಿಳೆಯರು ಹಾಗೂ ಇತರೆ ಇಬ್ಬರು ಸೇರಿ 1,55,519 ಮತದಾರರು ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ 96,777 ಪುರುಷರು, 90,946 ಮಹಿಳೆಯರು ಹಾಗೂ ಇತರೆ ಒಬ್ಬರು ಸೇರಿ 11,87,724 ಮತದಾರರು ಮತ ಚಲಾಯಿಸಿದ್ದಾರೆ.
ಶಿರಹಟ್ಟಿ ಕ್ಷೇತ್ರದಲ್ಲಿ ಶೇ.72.19, ಗದಗ ಕ್ಷೇತ್ರದಲ್ಲಿ ಶೇ.74.30, ರೋಣ ಕ್ಷೇತ್ರದಲ್ಲಿ ಶೇ.73.16, ಹಾನಗಲ್ ಕ್ಷೇತ್ರದಲ್ಲಿ ಶೇ.82.38, ಹಾವೇರಿ ಕ್ಷೇತ್ರದಲ್ಲಿ ಶೇ.77.29, ಬ್ಯಾಡಗಿ ಕ್ಷೇತ್ರದಲ್ಲಿ ಶೇ.82.02, ಹಿರೇಕೆರೂರು ಕ್ಷೇತ್ರದಲ್ಲಿ ಶೇ.82.63 ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.78.53ರಷ್ಟು ಮತದಾನವಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ.82.68ರಷ್ಟು ಹೆಚ್ಚು ಮತದಾನವಾದರೆ, ಶಿರಹಟ್ಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.72.19ರಷ್ಟು ಮತದಾನ ದಾಖಲಾಗಿದೆ. ಕಳೆದ 2019ರ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಶೇ.74.01ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.77.60ರಷ್ಟು ಮತದಾನವಾಗಿದ್ದು, ಶೇ.3.59ರಷ್ಟು ಅಧಿಕ ಮತದಾನವಾಗಿದೆ.
ಜಿಲ್ಲೆಯಲ್ಲಿ ಶೇ.79.82 ಮತದಾನ
ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.79.82 ರಷ್ಟು ಮತದಾನವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಶೇ.82.36, ಶಿಗ್ಗಾಂವ ಕ್ಷೇತ್ರದಲ್ಲಿ ಶೇ.77.24, ಹಾವೇರಿ ಕ್ಷೇತ್ರದಲ್ಲಿ ಶೇ.77.24, ಬ್ಯಾಡಗಿ ಕ್ಷೇತ್ರದಲ್ಲಿ ಶೇ.81.98, ಹಿರೇಕೆರೂರು ಕ್ಷೇತ್ರದಲ್ಲಿ ಶೇ.82.62 ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.78.5 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಕಳೆದ 2019ರ ಚುನಾವಣೆಯಲ್ಲಿ 75.5 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.4.32ರಷ್ಟು ಅಧಿಕ ಮತದಾನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.