ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ 23ನೇ ವಾರ್ಡಿನ ಒಕ್ಕಲಗೇರಿ ಓಣಿಯಲ್ಲಿರುವ ಶಾಲೆ ನಂ.3ರಲ್ಲಿ 78ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಗಣ್ಯ ವ್ಯಾಪಾರಸ್ಥರಾದ ಕೆ.ಆಯ್. ಸಂಪಗಾವಿಯವರು ಧ್ವಜಾರೊಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 23ನೇ ವಾರ್ಡಿನ ನಗರಸಭಾ ಸದಸ್ಯ ಹಾಗೂ ವಿರೋಧ ಪಕ್ಷದ ಉಪ ನಾಯಕ ಜನಾಬ ಬರಕತಲಿ ಮುಲ್ಲಾ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನೀವೆಲ್ಲರೂ ಉತ್ತಮ ಪ್ರಜೆಗಳಾಗಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಗಣ್ಯರಾದ ಕೆ.ಆಯ್. ಸಂಪಗಾವಿ ಶಾಲಾ ಮಕ್ಕಳ ಉಪಯೋಗಕ್ಕಾಗಿ 50 ತಟ್ಟೆಗಳನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಮ್‌ಸಿ ಸದಸ್ಯರಾದ ಲಕ್ಷ್ಮೀ ಎಸ್.ಮುಳಗುಂದ, ಉಪಾಧ್ಯಕ್ಷ ಮಲ್ಲೇಶಪ್ಪ ಹೊಂಬಳ, ಗಣ್ಯರಾದ ನಿಂಗಪ್ಪ ಪಡಗದ, ರಾಮಣ್ಣ ಗುಜಮಾಗಡಿ, ಪ್ರಶಾಂತ ಶಾಬಾದಿಮಠ, ಅಮೀರಸಾಬ ಬಾವಿಕಟ್ಟಿ, ಪ್ರಸನ್ನ ಬ್ಯಾಹಟ್ಟಿ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಮಹ್ಮದಶಿರಾಜ್ ಸೈಪಣ್ಣವರ, ಮುತ್ತಣ್ಣ ಭರಡಿ, ಸಿದ್ದಲಿಂಗೇಶ ಸಂಗನಾಳ, ಶಾಲೆಯ ಪ್ರಧಾನ ಗುರುಗಳಾದ ಪಿ.ಎಸ್. ಮಣ್ಣೂರ, ಸಹ ಶಿಕ್ಷಕಿಯರಾದ ಎಸ್.ಎಸ್. ಹೀರೇಮಠ, ಜಿ.ಕೆ. ಕಾಳೆ, ಎಸ್.ಬಿ. ಬಾಗೂರ, ಬಿಎಡ್ ವಿದ್ಯಾರ್ಥಿಗಳಾದ ದೀಪಾ ನೇತ್ರಾವತಿ, ಅಡುಗೆ ಸಿಬ್ಬಂದಿಗಳಾದ ಗಿರಿಜವ್ವ ಪಲ್ಲೇದ, ಲಕ್ಷ್ಮಿ ಹೀರೇಮಠ ಮತ್ತಿತರರು ಉಪಸ್ಥಿತರಿದ್ದರು.