ಕಾರವಾರ:- ರಕ್ಷಣಾ ಸಿಬ್ಬಂದಿಗಳ 9 ಗಂಟೆಗಳ ಕಾರ್ಯಚರಣೆಯಿಂದ ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆಯಲಾಗಿದೆ.
Advertisement
ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಬಾಗ್ ಬ್ರಿಡ್ಜ್ ಬಳಿ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ.
ಆಗಸ್ಟ್ 7ರಂದು ಸೇತುವೆ ಕುಸಿದಾಗ ಕಾಳಿ ನದಿಗೆ ಲಾರಿ ಬಿದ್ದಿತ್ತು. ತಮಿಳುನಾಡು ಮೂಲದ ಸೆಂಥಿಲ್ ಒಡೆತನದ ಲಾರಿಯನ್ನು 2 ಕ್ರೇನ್, 3 ಟೋಯಿಂಗ್ ವೆಹಿಕಲ್, ಈಶ್ವರ ಮಲ್ಪೆ ತಂಡದಿಂದ ಹೊರತೆಗೆಯಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸೇರಿ 100ಕ್ಕೂ ಜನರ ಪ್ರಯತ್ನ ಸಫಲವಾಗಿದೆ.
ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು ಬೀಡು ಬಿಟ್ಟಿದ್ದರು ಎನ್ನಲಾಗಿದೆ.