ವಿಜಯಪುರ:- ಸಿಎಂ ಸ್ಥಾನದಿಂದ ಸಿದ್ದು ಇಳಿಸಿ ಜಮೀರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಮುಸ್ಲಿಂರ ಸಂಖ್ಯೆ 50% ಆದರೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಒದ್ದು ಇಳಿಸಿ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಆಗುತ್ತಾರೆ. ಬಳಿಕ ಸಿದ್ದರಾಮಯ್ಯರನ್ನು ಅವರ ಮನೆಯಲ್ಲಿ ಚಹಾ ಕೊಡುವುದಕ್ಕೆ ಇಟ್ಟುಕೊಳ್ಳುತ್ತಾರೆ ಎಂದರು.
ಈ ವಿಚಾರವನ್ನು ಸಿದ್ದರಾಮಯ್ಯ ಅವರು ತಲೆಯಲ್ಲಿ ಇಟ್ಟಿಕೊಳ್ಳಿ ಎಂದು ಕಿಡಿಕಾರಿದ್ದಾರೆ. ಮುಂದಿನ ಜನ್ಮದಲ್ಲಿ ನಾ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಂದಿನ ಜನ್ಮ ನೀವು ಹುಟ್ಟಿದರಲ್ಲಾ? ದೇವರು ನಿಮ್ಮಂಥವರನ್ನೇಲ್ಲಾ ಹೇಗೆ ಹುಟ್ಟಿಸುತ್ತಾನೆ. ಸಾಕಾಗಿದೆ ಕೇವಲ ಮುಸ್ಲಂರ ಕೆಲಸ ಮಾಡಿದ್ದೀರಿ ಎಂದು ಹೇಳಿದ್ದಾರೆ.
ಮುಸ್ಲಿಂ ಓಲೈಕೆಯಿಂದ ನಿಮ್ಮ ದೇವರ ಗುಡಿಗಳು ಉಳಿಯೋದಿಲ್ಲ. ಯಾವ ದೇವರಿಗೆ ಹೋಗಿ ಕೈ ಮುಗಿಯುವವರಿದ್ದೀರಿ. 2047ಕ್ಕೆ ಭಾರತವನ್ನ ನಾವು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಹೇಳುತ್ತಾರೆ. ಕಾರಣ ನೀವು ಒಂದೇ ಮದುವೆ ಆಗೋದು, ಎರಡೇ ಮಕ್ಕಳು. ಅವರು ಐದು ಮದುವೆ ಆಗುತ್ತಾರೆ. ಇಪ್ಪತ್ತೈದು ಮಕ್ಕಳು ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಯತ್ನಾಳ್ ಜತೆ ವಿಜಯೇಂದ್ರ ಹೊಂದಾಣಿಕೆ ಮಾಡಿಸುವ ವಿಚಾರವಾಗಿ ಮಾತನಾಡಿದ ಅವರು, ನೋ.. ನೋ.. ಯಾವುದೇ ಕಾರಣಕ್ಕೂ ನಾನು ಹೊಂದಾಣಿಕೆಗೆ ಒಪ್ಪಲ್ಲ. ಇಬ್ಬರ ಮಧ್ಯೆ ಒಪ್ಪಂದದ ಬಗ್ಗೆ ನನ್ನ ಜೊತೆ ಯಾರೂ ಮಾತನಾಡಿಲ್ಲ. ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಅಂತಾ ನಿರ್ಧಾರ ಮಾಡಲಾಗಿದೆ. ಏನೇ ಇದ್ದರೂ ಎಲ್ಲರೂ ಸೇರಿ ಮಾತುಕತೆ ಮಾಡುತ್ತೇವೆ ಎಂದರು.