ನವದೆಹಲಿ: ಶೇಕಡ 99ರಷ್ಟು ಮದುವೆಗಳಲ್ಲಿ ಪುರುಷರ ತಪ್ಪೇ ಇರುತ್ತದೆ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಹೇಳಿದ್ದಾರೆ. ಸದ್ಯ ಈ ಹೇಳಿಕೆ ಎಲ್ಲೇಡೆ ಭಾರೀ ಚರ್ಚೆಯಾಗತೊಡಗಿದೆ. ಹೌದು ಮೊನ್ನೆ ಬೆಳ್ ಬೆಳಗ್ಗಯೇ ಅತುಲ್ ಸುಭಾಷ್ ಎಂಬ ಸಾಫ್ಟ್ವೇರ್ ಕೆಲಸಗಾರ ತನ್ನ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದ.. ಕೊರಳಲ್ಲಿ ನ್ಯಾಯ ಬಾಕಿ ಇದೆ ಅನ್ನೋ ಬೋರ್ಡ್,
ಮನೆಯಲ್ಲಿ ಆತ ಆತ್ಮಹತ್ಯೆಗೆ ಮೊದಲೇ ಪ್ಲಾನ್ ಮಾಡಿದ್ದ ಅನ್ನೋ ಕುರುಹು, ಸುಧೀರ್ಗವಾಗಿ ಬರೆದಿರೋ ಡೆತ್ ನೋಟ್, ಗ್ರೂಪ್ ಗಳಲ್ಲಿ ಡೆತ್ ಮೆಸೇಜ್, ಮಗುವಿಗಾಗಿ ಗಿಫ್ಟ್, ಎಲ್ಲದರ ನಡುವೆ ವಿಡಿಯೋ ಮಾಡಿ ಎಲ್ಲವನ್ನೂ ಹೇಳಿಕೊಂಡಿದ್ದಾತ ತನಗೆ ಸಾವಿನ ನಂತರವಾದ್ರೂ ನ್ಯಾಯ ಸಿಗಲಿ ಅಂತಾ ತನ್ನ ಪ್ರಾಣವನ್ನೇ ಬಿಟ್ಟಿದ್ದ.. ಇದಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ನಟಿ,
ಅತುಲ್ ಆತ್ಮಹತ್ಯೆ ವಿಷಯ ನನ್ನನ್ನೂ ಆಘಾತಗೊಳಿಸಿದೆ. ಈ ವಿಷಯವನ್ನು ಪರಿಶೀಲಿಸಬೇಕು, ಜೊತೆಗೆ ಇಂತಹ ಘಟನೆಗಳನ್ನು ಎದುರಿಸಲು ಪ್ರತ್ಯೇಕ ಸಂಸ್ಥೆಯನ್ನು ರಚಿಸಬೇಕು ಎಂದು ಕಂಗನಾ ಹೇಳಿದ್ದಾರೆ. ಮದುವೆಯು ನಮ್ಮ ಭಾರತೀಯ ಸಂಪ್ರದಾಯದೊಂದಿಗೆ ಸಂಪರ್ಕ ಹೊಂದಿರುವವರೆಗೂ ಅದು ಉತ್ತಮವಾಗಿದೆ. ಆದರೆ ಕಮ್ಯುನಿಸಂ, ಸಮಾಜವಾದ ಮತ್ತು ಸ್ತ್ರೀವಾದದ ಧೋರಣೆಗಳು ಮದುವೆಯ ಸಾಂಪ್ರದಾಯಿಕತೆಯ ಹಳಿ ತಪ್ಪಿಸುತ್ತವೆ ಎಂದು ಕಂಗನಾ ಹೇಳಿದ್ದಾರೆ.