ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಕಳಸಾಪುರ ಸುಕ್ಷೇತ್ರದ ಶ್ರೀ ಈಶ್ವರ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ರೂವಾರಿ ಲಿಂ. ಶ್ರೀಪಾದಯ್ಯ ಇಟಗಿಮಠ ಅವರ ಸ್ಮರಣೆಯಲ್ಲಿ ಏ.9ರಂದು ಸುಕ್ಷೇತ್ರದ ಶ್ರೀ ಈಶ್ವರ, ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವ, ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.
ಏ.9ರಂದು ಬೆಳಿಗ್ಗೆ 11.30ಕ್ಕೆ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಬೆಂಗಳೂರಿನ
ಸುಕ್ಷೇತ್ರ ಶಿವಗಂಗಾದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಮಣಕವಾಡದ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಬಳಗಾನೂರು ಚನ್ನವೀರ ಶರಣರ ಮಠದ ಶ್ರೀ ಶಿವಶಾಂತವೀರ ಶರಣರು, ಅಡ್ನೂರ-ರಾಜೂರ-ಗದಗ ಬ್ರಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಓಂಕಾರಗಿರಿ ಓಂಕಾರೇಶ್ವರ ಹಿರೇಮಠದ ಶ್ರೀ ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಗರಹಾಳ ಬಸವಧರ್ಮ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು, ಸಿದ್ದನಕೊಳ್ಳದ ಶ್ರೀ ಡಾ. ಶಿವಕುಮಾರ ಸ್ವಾಮಿಗಳು, ಸಿಂಧೂರಿನ ಸಿದ್ದಾಶ್ರಮ ವೆಂಕಟಗಿರಿಯ ಡಾ. ಸಿದ್ದರಾಮೇಶ್ವರ ಶರಣರು, ಕೋಟ್ನಿಕಲ್ ಸಂಗಮೇಶ್ವರ ಮಠದ ವೇ.ಮೂ.ಸಂಗಯ್ಯ ತಾತನವರು, ಗಜೇಂದ್ರಗಡ ರೇಣುಕಾಚಾರ್ಯ ಮಠದ ವೇ.ಮೂ.ಚಂದ್ರಶೇಖರ ಶರಣರು,ಅಡ್ನೂರ-ನರೇಗಲ್ ದರ್ಗಾದ ರೆಹಮಾನ್ ಮಂಜೂರ ಹುಸೇನ್ ಶಾವಲೀ ಶರಣರು ಉಪಸ್ಥಿತರಿರುವರು.
ಬೆಳಗಾವಿಯ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಅಧ್ಯಕ್ಷತೆ ವಹಿಸುವರು. ವಿಜಯಪುರದ ನಿವೃತ್ತ ಡಿವೈಎಸ್‌ಪಿ ಬಿ.ಆರ್. ಚೌಕಿಮಠ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಶೇಷ ಅಹ್ವಾನಿತರಾಗಿ ವಿ.ಪ ಸದಸ್ಯರಾದ ಎಸ್.ವಿ. ಸಂಕನೂರ, ಸಲೀಂ ಅಹಮದ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಅನಿಲ್ ಮೆಣಸಿಕಾಯಿ, ಎಚ್.ಜಿ. ಹಿರೇಗೌಡ್ರ, ಶಿವಕುಮಾರಗೌಡ ಪಾಟೀಲ, ಯೋಗೇಶ ಎ., ಬಸವರಾಜ ಬೆಳದಡಿ, ಮಲ್ಲಪ್ಪ ಕಲ್ಗುಡಿ, ಬಸವಣ್ಣಪ್ಪ ಚಿಂಚಲಿ, ಸಿ.ಬಿ. ದೊಡ್ಡಗೌಡ್ರ, ಶಂಭುಲಿAಗಯ್ಯ ಕಲ್ಮಠ, ಪಿ.ಸಿ. ಹಿರೇಮಠ, ಗ್ರಾ.ಪಂ ಅಧ್ಯಕ್ಷೆ ಅನುಸೂಯ ಪಾಟೀಲ, ಉಪಾಧ್ಯಕ್ಷೆ ರಾಜೇಶ್ವರಿ ಘೋಡಕೆ, ಮಂಜುನಾಥಸ್ವಾಮಿ ಹಿರೇಮಠ, ರಾಜು ಖಾನಾಪುರ, ಅಶೋಕ ಹೊಸಅಂಗಡಿ, ಗುರು ಹಡಗಲಿಮಠ ಭಾಗವಹಿಸುವರು. ಶಿವಲಿಂಗಯ್ಯ ಸ್ವಾಮಿಗಳು ಹಿರೇಮಠ ಸಿದ್ದಾಪುರ ಅವರು ಕಾರ್ಯಕ್ರಮ ನಿರುಪಿಸುವರು. ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗುವುದು.
ಏ.10ರ ಸಂಜೆ 5.30 ಗಂಟೆಗೆ ಲಘು ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಏ.9ರ ಸಂಜೆ 7 ಗಂಟೆಗೆ ಲಿಂ. ಶ್ರೀಪಾದಯ್ಯ ಇಟಗಿಮಠ, ಲಿಂ. ರಮೇಶ ಘೋಡಕೆ, ಲಿಂ. ಈರಯ್ಯ ಇಟಗಿಮಠ, ದಿ. ಮಕ್ಬುಲ್‌ಸಾಬ್ ದೊಡ್ಡಮನಿ ಇವರ ಸ್ಮರಣಾರ್ಥ ಕಲಾವಿದ ವೀರಯ್ಯ ಇವರ ನೇತೃತ್ವದಲ್ಲಿ ಗುರೂಜಿ ಮೆಲೋಡಿಸ್ ಕಲಾತಂಡ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು. ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ನಿಂಗಯ್ಯ ಇಟಗಿಮಠ ಉದ್ಘಾಟಿಸುವರು. ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ ಘೋಡಕೆ ಅಧ್ಯಕ್ಷತೆ ವಹಿಸುವರು.