ಮತದಾನದಿಂದ ಯಾರೂ ಹೊರಗುಳಿಯಬಾರದು: ಸುಭಾಸ್ ದೈಗೊಂಡ

0
mata jagruti
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ ನಮ್ಮದಾಗಿದ್ದು, ದೇಶದಲ್ಲಿಯ ಜನತೆಗೆ ಸಂವಿಧಾನವು ಮತದಾನ ಎಂಬ ವಿಶೇಷ ಹಕ್ಕನ್ನು ನೀಡಿದೆ.

Advertisement

ಸಂವಿಧಾನ ನೀಡಿದ ಈ ಹಕ್ಕನ್ನು 18 ವರ್ಷ ವಯೋಮಿತಿ ಮೀರಿದ ಎಲ್ಲ ಅರ್ಹ ಮತದಾರರು ಮೇ.7ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು. ಇದು ಎಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ ಆಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ್ ದೈಗೊಂಡ ಹೇಳಿದರು.

ಸೋಮವಾರ ಶಿರಹಟ್ಟಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ತಾಲೂಕಾ ಆಸ್ಪತ್ರೆಯಿಂದ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ಅರ್ಹ ಮತದಾರರು ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶ ನಿರ್ಮಿಸೋಣ. ಮತದಾನ ದಿನದಂದು ಸಮಯ ವ್ಯರ್ಥ ಮಾಡದೆ ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆ ತೆಗೆದುಕೊಂಡು ತೆರಳಿ ಮತ ಚಲಾಯಿಸಿ ಶೇ.100ರಷ್ಟು ಮತದಾನವಾಗುವುದಕ್ಕೆ ಎಲ್ಲ ಮತದಾರರು ಭಾಗಿಯಾಗಬೇಕು. ಒಂದೊಂದು ಮತವು ಸಹ ಶ್ರೇಷ್ಠವಾಗಿದ್ದು, ಮತದಾರರ ಪಟ್ಟಿಯಲ್ಲಿರುವ ಯಾರೂ ಸಹ ಮತದಾನದಿಂದ ಹೊರಗುಳಿಯಬಾರದು ಎಂದರು.

ತಾಲೂಕಾ ಆಸ್ಪತ್ರೆಯಿಂದ ಬಸವೇಶ್ವರ ವೃತ್ತ, ಬಜಾರ ವೃತ್ತ, ನೆಹರು ವೃತ್ತ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ತಾ.ಪಂನ ಅಶೋಕ ಧನವೆ, ಜಗದೀಶ ಕೋಡಿಹಳ್ಳಿ, ಎಂ.ಆರ್. ಹುರುಳಿಕುಪ್ಪಿ, ಎಂ.ಜಿ. ಚನ್ನಮ್ಮನವರ, ಲಿಂಗರಾಜ ನಾರ್ಶಿ, ಮಾಂತೇಶ ತಿಮ್ಮಾಪೂರ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here