ಸಮಗ್ರ ಕೃಷಿಯಿಂದ ಸ್ವಾವಲಂಬಿ ಬದುಕು : ಡಾ. ಸಿ.ಎಂ. ರಫೀ

0
siddeshwara jatre
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಾ. ಸಿ.ಎಂ. ರಫೀ ಹೇಳಿದರು.

Advertisement

ಅವರು ಪಟ್ಟಣದ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಕಡುಬಿನ ಕಾಳಗ ನಂತರ ಅನುಭಾವ ಗೋಷ್ಠಿ-2ರಲ್ಲಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ರೈತರು ಏಕ ಬೆಳೆ ಪದ್ಧತಿಯಿಂದ ಹೊರ ಬಂದು ಅಗತ್ಯ ತಕ್ಕಂತೆ ಮಿಶ್ರ ಬೆಳೆಗಳನ್ನು ಬೆಳೆಯುವುದರ ಜೊತೆಯಲ್ಲಿ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ, ಮೀನು ಸಾಕಾಣಿಕೆ, ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರಿಂದ ಸಾಕಷ್ಟು ಆದಾಯ ಪಡೆಯಬಹುದು. ರೈತರಿಗಾಗಿ ಕೃಷಿ ಇಲಾಖೆಯಿಂದ ಹತ್ತು ಹಲವು ಯೋಜನೆಗಳಿದ್ದು, ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು.

ಗವಿಮಠದ ಡಾ.ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಐತಿಹಾಸಿಕ ದೇವಾಲಯಗಳು ಇಂದು ನಶಿಸಿಹೋಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜೊತೆಯಲ್ಲಿ ಜಾತ್ರೆಗಳನ್ನು ಮಾಡುವ ಮೂಲಕ ಜನರಲ್ಲಿ ಆಧ್ಯಾತ್ಮ ಚಿಂತನ-ಮಂಥನ, ಜ್ಞಾನವನ್ನು ಪ್ರಸಾರ ಮಾಡುವ ಕಾರ್ಯಗಳು ಸಿದ್ದೇಶ್ವರ ಜಾತ್ರಾ ಸಮಿತಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಉಡುಪಿಯ ಕಲಾ ಸಿಂಧು ಬಳಗದ ಕಲಾವತಿ ದಯಾನಂದ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ವಿಜಯಲಕ್ಷ್ಮಿ ಹಿರೇಮಠರಿಂದ ಸಂಗೀತ ಸೇವೆ ಜರುಗಿತು.ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಅಧ್ಯಕ್ಷತೆಯನ್ನು ಆರ್.ಸಿ. ಕಮಾಜಿ ವಹಿಸಿದ್ದರು.

ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪೂರ, ಮನ್ಸೂರ ಹಣಗಿ, ಫಕ್ಕೀರಯ್ಯ ಅಮೋಘಿಮಠ, ಅಶೋಕ ಸೊನಗೋಜಿ, ಮಾಹಾಂತಪ್ಪ ಪಲ್ಲೇದ, ಕುಬೇರಪ್ಪ ಗಡಾದ, ಸಂಜಯ ನೀಲಗುಂದ, ಹೋನ್ನಪ್ಪ ನೀಲಗುಂದ, ಅಶೋಕ ಮೆಣಸಿನಕಾಯಿ, ಅಶೋಕ ಹುಣಸಿಮರದ, ಹಜರತ್‌ಅಲಿ ಲಾಡಸಾಬನವರ, ಅನೂಪ ಕೆಂಚನಗೌಡರ, ಬಸವರಾಜ ಹುಣಸಿಮರದ, ಪಿ.ಎಸ್. ಮರಿದೇವರಮಠ, ಎಸ್.ಎಂ. ಉಜ್ಜಣ್ಣವರ, ಬಿ.ವಿ. ಚಕ್ರಸಾಲಿ, ಮಂಜುನಾಥ ಮಟ್ಟಿ ಇದ್ದರು.

ಮುಳಗುಂದದಲ್ಲಿ ಜರುಗುವ ಜಾತ್ರೆಗಳು ಕೇವಲ ಮೋಜು-ಮಸ್ತಿ ಮಾಡದೇ, ಬರೀ ಉತ್ತತ್ತಿ, ಕಡುಬಿನ ಕಾಳಗ ಮಾಡದೇ, ನಾಡಿನ ಹೆಸರಾಂತ ಸ್ವಾಮಿಜಿಗಳನ್ನು ಬರಮಾಡಿಕೊಂಡು ಆಧ್ಯಾತ್ಮದ ಅನುಭವಗಳನ್ನು ಉಣಬಡಿಸುತ್ತಿದ್ದು ಜಾತ್ರೆಗಳಿಗೆ ಮೆರುಗು ಬಂದಿದೆ ಎಂದು ಗವಿಮಠದ ಡಾ.ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here