Homecultureಸಂಭ್ರಮದಿಂದ ಜರುಗಿದ ಮಾಯಮ್ಮ ದೇವಿಯ ಹೋಳಿಗೆ ಜಾತ್ರೆ

ಸಂಭ್ರಮದಿಂದ ಜರುಗಿದ ಮಾಯಮ್ಮ ದೇವಿಯ ಹೋಳಿಗೆ ಜಾತ್ರೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮದ ಆರಾಧ್ಯ ದೇವತೆ ಶ್ರೀಮಾಯಮ್ಮದೇವಿ, ಶ್ರೀಅಕ್ಕಮ್ಮ ದೇವಿ ಹಾಗೂ ಶ್ರೀಬೀರಲಿಂಗೇಶ್ವರ ಜಾತ್ರಾ ಮಹೋತ್ಸವ(ಹೋಳಿಗೆ ಜಾತ್ರೆ) ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಯುಗಾದಿ ಹಬ್ಬದ ನಿಮಿತ್ತ ಮಾಯಮ್ಮ, ಅಕ್ಕಮ್ಮ ಹಾಗೂ ಬೀರಲಿಂಗೇಶ್ವರರಿಗೆ ವೇ.ಮೂ. ಸೋಮಶೇಖರಯ್ಯ ಗುರುವಿನ ಇವರಿಂದ ಅಭಿಷೇಕ, ಗಣಹೋಮ ಮತ್ತು ಆದಿಶಕ್ತಿ ಹೋಮ ವೇ.ಮೂ.ಗುರುಶಾಂತಯ್ಯ ಹಿರೇಮಠ ಇವರಿಂದ ನಡೆಯಿತು.

ನೂರಾರು ಮಹಿಳೆಯರು ಗುಂಪು ಗುಂಪಾಗಿ ಕುಳಿತುಕೊಂಡು ಮೈದಾ ಹಿಟ್ಟು ಕುದಿಸಿದ ಕಡಲೆ ಬೇಳೆ, ಬೆಲ್ಲವನ್ನು ಹದಮಾಡಿಕೊಳ್ಳವುದು, ಒಲೆಯ ಮೇಲೆ ಬಿಸಿ ಬಿಸಿಯಾದ ಹೋಳಿಗೆ ಸಿದ್ದ ಪಡಿಸುವುದನ್ನು ನೋಡುವುದೇ ಸೊಗಸು. ಬಿಸಿ ಬಿಸಿ ಹೋಳಿಗೆ, ಬದನೆಕಾಯಿ ಪಲ್ಲೆ, ಉಪ್ಪಿನಕಾಯಿ, ತುಪ್ಪ, ಹಪ್ಪಳ, ಸೋನಾ ಮಸೂರಿ ಅಕ್ಕಿಯಿಂದ ತಯಾರಿಸಿದ ಅನ್ನ ಸೇರಿದಂತೆ ರುಚಿ-ಶುಚಿಯಾದ ಪ್ರಸಾದವನ್ನು ಗ್ರಾಮದ ಸರ್ವ ಜನಾಂಗದವರು ಸಾವಿರಾರು ಸಂಖ್ಯೆಯಲ್ಲಿ ಕುಳಿತುಕೊಂಡು ಸ್ವೀಕರಿಸುತ್ತಾರೆ.

ಹೋಳಿಗೆ ಪ್ರಸಾದ ರೂಪದಲ್ಲಿ ಸಮ ಸಮಾಜ ನಿರ್ಮಾಣ, ಜಾತಿ ವ್ಯವಸ್ಥೆಯ ನಿಮೂರ್ಲನೆ ಸೇರಿದಂತೆ ಸಮಾಜ ಪರಿವರ್ತನೆಯ ಆಶಯಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತದೆ.

ಸೇವಾ ಸಮಿತಿ ಅಧ್ಯಕ್ಷ ಜಗದೀಶ ಬಂಡಿ, ಉಪಾಧ್ಯಕ್ಷ ಬಸವರಾಜ ತಾರಿಕೊಪ್ಪ, ಕಾರ್ಯದರ್ಶಿ ಕಾಳಿಂಗರಾಜ ಕೆಂಪೋಡಿ, ಖಜಾಂಚಿ ಮಳ್ಳಪ್ಪ ಕೊಳ್ಳಾರ, ಗೋಣಿಬಸಪ್ಪ ಎಸ್.ಕೊರ್ಲಹಳ್ಳಿ, ಕುಬೇರಪ್ಪ ಕೊಳ್ಳಾರ, ಕೆ.ಕೆ. ಬಂಡಿ, ಸೋಮಣ್ಣ ಗುಡ್ಡದ, ವೆ.ಮೂ ಮುತ್ತು ಹಿರೇಮಠ, ಬಸವರಾಜ ಪೂಜಾರ,

ಶಿವಪ್ಪ ಕೊಳ್ಳಾರ, ರೇವಣಸಿದ್ದಪ್ಪ ಕರಿಗಾರ, ದೇವಪ್ಪ ಪೂಜಾರ, ಬಸವರಾಜ ಬಂಡಿ, ಕುಬೇರಪ್ಪ ಬಂಡಿ, ಕುಬೇರಪ್ಪ ಕೊಳ್ಳಾರ, ಶ್ರೀಕಾಂತಪ್ಪ ಕೊಳ್ಳಾರ, ಯಲ್ಲಪ್ಪ ಕರಿಗಾರ, ಮಾರುತಿ ಹೊಂಬಳ, ರಾಮಪ್ಪ ಬಚನಹಳ್ಳಿ, ದೇವಪ್ಪ ಬಚನಹಳ್ಳಿ, ಶಂಕ್ರಪ್ಪ ಗುಡಿ, ರಮೇಶ ಯಂಡಿಗೇರಿ, ರವಿ ತಾರಿಕೊಪ್ಪ, ದೇವಪ್ಪ ದಾಳೀನ, ವಿನಯಕ ವರ್ಣಿಕರ, ದೇವಪ್ಪ ಬಾರಿಕೇರ, ಪ್ರಕಾಶ ಕೀಲಾರಿ ಸೇರಿದಂತೆ ಜಾತ್ರಾ ಕಮೀಟಿಯ ಎಲ್ಲಾ ಪದಾಧಿಕಾರಿಗಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವ ಹೋಳಿಗೆ ಉತ್ಸವವೆಂದು ಪ್ರತೀತಿ ಹೊಂದಿ, ಈ ಭಾಗದ ಜಾತಿ-ಮತ-ಪಂಥ ಮರೆತು ಗ್ರಾಮದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ ಈ ಭಾಗದಲ್ಲಿ ವಿಶಿಷ್ಠ ಜಾತ್ರೆಯಾಗಿ ಗುರುತಿಸಿಕೊಳ್ಳುತ್ತಿದೆ. ಜಾತ್ರೆಯಲ್ಲಿ ಹಿರಿಯರು-ಕಿರಿಯರು ಎನ್ನದೆ ಶ್ರದ್ಧಾ ಭಕ್ತಿಯಿಂದ ಶ್ರಮಿವಹಿಸಿ ದುಡಿಯುತ್ತಾರೆ ಎನ್ನುತ್ತಾರೆ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜದ ಹಿರಿಯರಾದ ಬೀರಪ್ಪ ಎಸ್ ಬಂಡಿ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!