ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಏಪ್ರಿಲ್ 21ರ ಬೆಳಿಗ್ಗೆ 11ಕ್ಕೆ ನಡೆಯಲಿರುವ ಬಸವದಳದ 1590ನೇ ಶರಣ ಸಂಗಮದಲ್ಲಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
Advertisement
ಅಧ್ಯಕ್ಷತೆಯನ್ನು ಬಸವದಳದ ಹಿರಿಯರಾದ ಶರಣ ಎಸ್.ಎನ್. ಹಕಾರಿ ವಹಿಸುವರು. ಶರಣೆ ನಿವೃತ್ತ ಶಿಕ್ಷಕಿ ನೀಲಲೋಚನಾ ಸಿ.ಹಂಚಿನಾಳ ಉಪನ್ಯಾಸ ಮಾಡುವರು. ಕಾರಣ, ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.