ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಮಂಡಳಿಗೆ ಸೇವಾಕಾರ್ಯದ ಹಸ್ತಾಂತರ ಸಮಾರಂಭವು ಏ.28ರ ಸಂಜೆ 6ಕ್ಕೆ ನರೇಗಲ್ಲದ ಶ್ರೀ ದತ್ತಾತ್ರೇಯ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ ಎಂದು ಮಂಡಳಿಯ ನಿರ್ಗಮಿತ ಅಧ್ಯಕ್ಷ ಸಂಜೀವಕುಮಾರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭವನ್ನು ಗದುಗಿನ ಖ್ಯಾತ ವೈದ್ಯ ಡಾ. ಕುಶಾಲ ಗೋಡಖಿಂಡಿ ಉದ್ಘಾಟಿಸುವರು. ಇನ್ನೋರ್ವ ಖ್ಯಾತ ವೈದ್ಯ ಗಜೇಂದ್ರಗಡದ ಡಾ. ಆರ್.ಎಸ್. ಜೀರೆ ಹಾಗೂ ನಾಡಿನ ಖ್ಯಾತ ನಗೆ ಭಾಷಣಕಾರ, ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ದತ್ತ ಭಕ್ತ ಮಂಡಳಿಗೆ ಈಗಾಗಲೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಡಾ. ನಾಗರಾಜ ಲ.ಗ್ರಾಮಪುರೋಹಿತ(ಅಧ್ಯಕ್ಷ), ಆದರ್ಶ ಅ.ಕುಲಕರ್ಣಿ(ಉಪಾಧ್ಯಕ್ಷ), ರಘುನಾಥ ಚಿ. ಕೊಂಡಿ(ಪ್ರಧಾನ ಕಾರ್ಯದರ್ಶಿ), ಪ್ರಕಾಶ ಸ.ಕಾಳೆ(ಸಹ ಕಾರ್ಯದರ್ಶಿ), ಮಂಜುನಾಥ ದಾ. ಗ್ರಾಮಪುರೋಹಿತ(ಖಜಾಂಚಿ), ಉದಯ ಅ.ಸವದಿ(ಸಹ ಖಜಾಂಚಿ)ಯಾಗಿ ಆಯ್ಕೆಯಾಗಿದ್ದಾರೆ ಎಂದು ಸಂಜೀವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



