HomeBengaluru Newsಸೆನ್ಸಾರ್‌ಗೆ ಸಿದ್ಧವಾದ `ಒಬ್ಬಟ್ಟು' ಚಲನಚಿತ್ರ

ಸೆನ್ಸಾರ್‌ಗೆ ಸಿದ್ಧವಾದ `ಒಬ್ಬಟ್ಟು’ ಚಲನಚಿತ್ರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಕೀರ್ತನಾ ಮೂವ್ಹಿ ಮೇಕರ್ಸ್ ಅವರ, ಲೋಕೇಶ್ ವಿದ್ಯಾಧರ ಅವರ ನಿರ್ದೇಶನದ ‘ಒಬ್ಬಟ್ಟು’ ನಗೆ ಹೂರಣದ ಹಬ್ಬ ಕನ್ನಡ ಚಲನಚಿತ್ರದ ಪೋಸ್ಟ್ ಪ್ರೊಡಕ್ಷನ್ ಎಲ್ಲ ಹಂತದ ಕಾರ್ಯಗಳು ಮುಕ್ತಾಯಗೊಂಡು ಇದೀಗ ಸೆನ್ಸಾರ್‌ಗೆ ಹೊರಟಿದೆ.

ಹಾಸ್ಯಭರಿತ ಕಥಾಸಾರ ಹೊಂದಿದ ‘ಒಬ್ಬಟ್ಟು’ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು, ಹಲಗೂರು ಹೋಬಳಿ ಸಾಗ್ಯ ಸರಗೂರು ಗ್ರಾಮದಲ್ಲಿ ಮಾಡಲಾಗಿದೆ. ಯುಗಾದಿ ಹಬ್ಬದಲ್ಲಿ ನಡೆಯವ ಒಂದು ಪ್ರೇಮ ಕಥೆಯನ್ನು ಚಿತ್ರ ಹೊಂದಿದೆ. ಒಬ್ಬಟ್ಟಿನ ರುಚಿಯನ್ನು ಥಿಯೇಟರಗಳಲ್ಲೇ ಪ್ರೇಕ್ಷಕರು ಬಂದು ಸವಿಯಬೇಕು. ಈಗಾಗಲೇ ಮಾಸ್ ಮ್ಯೂಸಿಕ್ ಅಡ್ಡಾ ಯೂಟ್ಯೂಬ್‌ನಲ್ಲಿ ‘ಬಾರೋ ಮಗಾ ಬಾರೋ ಮಗಾ’, ‘ನನ್ನಾಕೆ ಪ್ರೀತಿ ಸಿಹಿ ಒಬ್ಬಟ್ಟಂಗೆ’ ಲಿರಿಕಲ್ ವಿಡೀಯೋ ಹಾಡುಗಳು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ.

ಚಿತ್ರದಲ್ಲಿ ನಾಯಕ ಅಮಿತ್‌ರಾವ್, ಕಿರುತೆರೆ, ಚಲನಚಿತ್ರ ಕಲಾವಿದೆ ಸುನಂದ ಕಲ್ಬುರ್ಗಿ, ಲೋಕೇಶ್ ವಿದ್ಯಾಧರ, ಮಂಡ್ಯ ನಾಗರಾಜ್, ಮುತ್ತುರಾಜ್.ಟಿ, ರಾಜು ಅರಸಿಕೆರೆ, ರೋಹಿಣಿ, ಧನಲಕ್ಷ್ಮಿ, ಸತೀಶ್ ಶೆಟ್ಟಿ, ರವಿ, ನಂಜಪ್ಪ ಡಿ.ಎಸ್ ಮುಂತಾದವರು ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಬೆಟ್ಟೇಗೌಡ ಕೀಲಾರ, ಸ್ವರ ಸಂಯೋಜನೆ ಮತ್ತು ಹಾಡುಗಾರಿಕೆ ಎ.ಪಿ. ರವಿಕೀರ್ತಿ, ನೃತ್ಯ ಅಲ್ಲಿನ್.ಎ, ಸಾಹಸ ಸೂರ್ಯ, ಸಂಕಲನ ಸಂಜೀವರೆಡ್ಡಿ, ಪ್ರಸಾಧನ ಯತೀಶ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ಸಹಕಾರ ಆನಂದ ಆರ್ಟ್ಸ್, ಸಹ ನಿರ್ದೇಶಕ ವಿಷ್ಣುವರ್ಧನ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಿರ್ಮಾಪಕರು ಲೋಕೇಶ್ ವಿದ್ಯಾಧರ ಆಗಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!