HomeGadag Newsಫೋರಂನ ಸದಸ್ಯರು ಮನಸ್ಸುಗಳನ್ನೂ ಕಟ್ಟುತ್ತಿದ್ದಾರೆ

ಫೋರಂನ ಸದಸ್ಯರು ಮನಸ್ಸುಗಳನ್ನೂ ಕಟ್ಟುತ್ತಿದ್ದಾರೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವೇಶ್ವರಯ್ಯ ಇಂಜಿನಿಯರ್ಸ್ ಫೋರಂನ ಎಲ್ಲ ಸದಸ್ಯರು ಕೇವಲ ಮನೆಗಳನ್ನಷ್ಟೇ ಕಟ್ಟುವದಿಲ್ಲ. ಅದರೊಂದಿಗೆ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಾ ಪುರಸ್ಕಾರ, ಕಾರ್ಮಿಕರಿಗೆ ಸನ್ಮಾನ, ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ ಮಕ್ಕಳಿಗಾಗಿ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಪ್ರಶಂಸನೀಯ ಎಂದು ಶ್ರೀ ಗುರು ಕೊಟ್ಟೂರೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ. ಪ್ರ.ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ನುಡಿದರು.

ನಗರದ ಶ್ರೀ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸಿವ್ಹಿಲ್ ಕನ್ಸಲ್ಟಂಟ್ಸ್ & ಇಂಜಿನಿಯರ್ಸ್ ಫೋರಂನ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ಆರ್ಕಿಟೆಕ್ಟ್ಸ್ ಹುಬ್ಬಳ್ಳಿ-ಧಾರವಾಡ ಸೆಂಟರ್‌ನ ಅಧ್ಯಕ್ಷ ಆರ್.ಅನೂಪಕುಮಾರ ಗುಪ್ತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಷ್ಟು ಕಡಿಮೆ ಅವಧಿಯಲ್ಲಿ ಫೋರಂನ ಸಾಧನೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ನೋಡಿದರೆ ನಮಗೆ ಹೆಮ್ಮೆ ಎನಿಸುತ್ತದೆ.

ಮುಂದಿನ ದಿನಗಳಲ್ಲಿ ಗದಗಜಿಲ್ಲೆಯ ಪುರಾತನ ದೇವಾಲಯಗಳನ್ನು ಜಿರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳೋಣ ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂ. ಬೂದೇಶ ಎಂ.ಬ್ಯಾಹಟ್ಟಿ, ಪ್ರೊಫೆಸರ್ ಇಂ. ಭರತಕುಮಾರ ಪಾಟೀಲ ಮಾತನಾಡಿದರು. ಫೋರಂನ ಉಪಾಧ್ಯಕ್ಷ ಇಂ. ಅಮರನಾಥ ಮಲ್ಲಾಡದ, ಇಂ. ಅಷ್ಪಕ್‌ಅಲಿ ಹೊಸಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇಂ. ಪ್ರವೀಣ ಕಲ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಇಂ, ಶಿವಕುಮಾರ ಪಟ್ಟಣಶೆಟ್ಟಿ ಸ್ವಾಗತಿಸಿದರು. ಪ್ರಾಧ್ಯಾಪಕ ಬಾಹುಬಲಿ ಜೈನರ್ ನಿರೂಪಿಸಿ ವಂದಿಸಿದರು.

ಪ್ರತಿಷ್ಠಿತ ಕಂಪನಿಗಳಾದ ಅಲ್ಟಾçಟೆಕ್ ಸಿಮೆಂಟ್, ನಿಪ್ಪೋನ್ ಪೇಂಟ್ಸ್, ಜೆ.ಎಸ್.ಡಬ್ಲೂ ಸ್ಟೀಲ್ಸ್ ಹಾಗೂ ಗದಗ-ಬೆಟಗೇರಿ ಅವಳಿ ನಗರದ ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯಾಪಾರಸ್ಥರಾದ ಜೈನ್ ಸ್ಟೀಲ್ಸ್, ವಿಶಾಲ ಸ್ಟೀಲ್ಸ್ & ಸಿಮೆಂಟ್ಸ್, ಬಾಲಾಜಿ ಟೈಲ್ಸ್, ವರ್ಧಮಾನ ಇಲೆಕ್ಟಿçಕಲ್ಸ್, ಸಫಾ ಸಿರಾಮಿಕ್ಸ್, ಸುಭಾಸ ಹಾರ್ಡವೇರ್ & ಪ್ಲೈವುಡ್ಸ್, ಬ್ಯಾಲಿಹಾಳ ಹಾರ್ಡ್ವೇರ್, ಜೆ.ಕೆ. ಸಿಮೆಂಟ್ (ಸ್ಕ್ವೇರ್ ಕನ್‌ಸ್ಟçಕ್ಷನ್), ಪವನ ಟ್ರೇಡರ್ಸ್, ದಾವಲ್ಮಲಿಕ್ ಟ್ರೇಡರ್ಸ್, ಜೆಎಂಜೆ ವರ್ಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!