HomePolitics Newsಬಿಜೆಪಿಯಿಂದ ದೇಶ ಸಾಲದ ಸುಳಿಯಲ್ಲಿದೆ : ಜಿ.ಎಸ್. ಪಾಟೀಲ್

ಬಿಜೆಪಿಯಿಂದ ದೇಶ ಸಾಲದ ಸುಳಿಯಲ್ಲಿದೆ : ಜಿ.ಎಸ್. ಪಾಟೀಲ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಡಂಬಳ : ಬಡವರ, ರೈತರ, ಕಾರ್ಮಿಕರ, ಮಹಿಳೆಯರ ಪರ ಇರುವ ಜನಪರ ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪುತ್ತಿದ್ದು, ಬಡವರು, ನಿರ್ಗತಿಕರು ಮತ್ತು ವಯೋವೃದ್ಧರ ಬದುಕಿಗೆ ಆಶಾಕಿರಣಗಳಾಗಿವೆ. ಸರ್ಕಾರದ ಯೋಜನೆ ಪಡೆಯುವ ಪ್ರತಿಯೊಬ್ಬ ಫಲಾನುಭವಿಗಳು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಕೋರಿದರು.

ಡಂಬಳ ಹೋಬಳಿಯ ಚಿಕ್ಕವಡ್ಡಟ್ಟ, ಗುಡ್ಡದಬೂದಿಹಾಳ, ಮುರಡಿ, ಕೆಲೂರ, ಹಾರೂಗೇರಿ, ಬಸಾಪೂರ, ತಾಮ್ರಗುಂಡಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ ಮಾತನಾಡಿದ ಅವರು, 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಸುಳ್ಳಿನ ಮೂಲಕ ಅಧಿಕಾರ ನಡೆಸಿದೆ. ಖಾಸಗಿ ಕಂಪನಿಗಳ ಓಲೈಕೆಗಾಗಿ ಅವರು ಮಾಡಿರುವ ಕೋಟ್ಯಾಂತರ ಸಾಲ ಮನ್ನಾ ಮಾಡಿ ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿರುವ ನರೇಂದ್ರ ಮೋದಿಯವರಿಗೆ ಜನಸಾಮಾನ್ಯರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಬಿಜೆಪಿ ಪಕ್ಷವನ್ನು ತೊರೆದು ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ, ಹಾರೂಗೇರಿ ಗ್ರಾಮದಲ್ಲಿ ನೂರಾರು ಯುವಕರು ಹಿರಿಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಗೋಣಿಬಸಪ್ಪ ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಪುಲಿಕೇಶಗೌಡ ಪಾಟೀಲ್, ಶರಣು ಬಂಡಿಹಾಳ, ಬಸುರಾಜ ಪೂಜಾರ, ರಾಜು ಡಾವಣಗೇರಿ, ಪ್ರಧಾನಿ ಕೆರಿ, ಮರಿಯಪ್ಪ ಸಿದ್ದಣ್ಣವರ, ಜಾಕೀರ ಮೂಲಿಮನಿ, ಸುರೇಶ ಮಾಳಗಿ, ಸುರೇಶ ಗಡಗಿ, ಶರಣಪ್ಪ ಮಾಗಡಿ, ಬಾಬು ಮೂಲಿಮನಿ, ಅಡವೆಪ್ಪ, ಬಸಪ್ಪ ಕುರಿ, ಹಾಲೇಶ ಹಳ್ಳಿ, ಶೋಭಾ, ರೇಖಾ ಭಜಂತ್ರಿ, ವಿಶ್ವನಾಥ ಪಾಟೀಲ್, ಮಲ್ಲಿಕಾರ್ಜುನ ಪ್ಯಾಟಿ, ಮುತ್ತಣ್ಣ ಕೊಂತಿಕಲ್ಲ, ನೂರಹಮ್ಮದ ಸರಕಾವಾಸ ಮಹಿಳೆಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ಇಂದು ಕಡು ಬಡವರು ಉತ್ತಮ ಬದುಕು ಬಾಳಬೇಕು ಎನ್ನುವ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನರ ಬಾಗಿಲಿಗೆ ತಲುಪಿಸಲಾಗುತ್ತಿದೆ. ರೈತರ ಸಾಲ ಮನ್ನಾ ಮಾಡಲಾವುದು. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಹಾವೇರಿ-ಗದಗ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಆರ್ಶೀದಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಕೋರಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img