HomePolitics Newsತಾಂಡಾಗಳಲ್ಲಿ ಡಾ.ಚಂದ್ರು ಲಮಾಣಿ ಪ್ರಚಾರ

ತಾಂಡಾಗಳಲ್ಲಿ ಡಾ.ಚಂದ್ರು ಲಮಾಣಿ ಪ್ರಚಾರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಶಾಸಕ ಡಾ.ಚಂದ್ರು ಲಮಾಣಿ ಶನಿವಾರ ತಾಲೂಕಿನ ವಿವಿಧ ತಾಂಡಾ ಮತ್ತು ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

ಆದ್ರಳ್ಳಿ ತಾಂಡಾದಲ್ಲಿ ಸೇರಿದ್ದ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿ, ಮತ, ಧರ್ಮ ಬೇಧ ಎಣಿಸದೇ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಸಮರ್ಪಿಸಿಕೊಂಡ ಮೋದಿಯವರು ಪ್ರಧಾನಿಯಾಗಿರುವುದು ನಮಗೆಲ್ಲ ಹೆಮ್ಮೆ. ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕಾಗಿದೆ.

ರೈತರ ಕಲ್ಯಾಣಕ್ಕೆ ಒತ್ತು ನೀಡಿದ್ದು, ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶವೇ ಕುಟುಂಬವೆಂದು ಭಾವಿಸಿ ಪ್ರತಿ ಮನೆಗಳಿಗೂ ಒಂದಿಲ್ಲೊಂದು ಮಹತ್ವದ ಯೋಜನೆಗಳನ್ನು ಕೊಡಮಾಡುವ ಮೂಲಕ ಜನಸಾಮಾನ್ಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜನತೆ ಬಿಜೆಪಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.

ಸಮರ್ಥ ನಾಯಕರಾಗಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಭೆಯಲ್ಲಿ ಶಿವಣ್ಣ ಲಮಾಣಿ, ದೇವಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಟೋಪಣ್ಣ ಲಮಾಣಿ ಸೇರಿ ತಾಂಡಾಗಳ ನಾಯಕರು, ಡಾವ್, ಕಾರಬಾರಿ ಗುರು ಹಿರಿಯರು ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img