ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.97 ಫಲಿತಾಂಶ

0
sslc exam result
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿರಹಟ್ಟಿಯ ಸಿಸಿಎನ್ ವಿದ್ಯಾಪ್ರಸಾರ ಸಂಸ್ಥೆಯ ಶ್ರೀ ಫ.ಚನ್ನವೀರೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ ಶೇ.97ರಷ್ಟಾಗಿದೆ.

Advertisement

ಪರೀಕ್ಷೆಗೆ ಹಾಜರಾಗಿದ್ದ 39 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಗೆ ಪ್ರಥಮ ವಿಶ್ವನಾಥ ಹಿರೇಮಠ- ಶೇ.97.5, ಮಲಿಕ ರೆಹಾನ್ ಫಣಿಬಂದ್-ಶೇ.97.6, ದ್ವಿತೀಯ ಮಹಾಂತೇಶ ಡೊಳ್ಳಿನ-ಶೇ.96.32, ತೃತೀಯ ಸ್ಥಾನವನ್ನು ಕೃತಿಕಾ ಕೊಪ್ಪದ-ಶೇ.96.16 ಹಾಗೂ ಭರತ್ ಬಡಭೀಮಪ್ಪನವರ-ಶೇ.96 ಸ್ಥಾನವನ್ನು ಪಡೆದಿದ್ದಾರೆ.

ತಾಲೂಕಾ ಮಟ್ಟದ ಮೆರಿಟ್ ಪಟ್ಟಿಯಲ್ಲಿ ಶಾಲೆಯ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿಕೊಂಡಿದ್ದಾರೆ. ಶಾಲೆಯ ಚೇರ್‌ಮನ್ ಚಂದ್ರಕಾಂತ ನೂರಶೆಟ್ಟರ ಸೇರಿದಂತೆ ಶಿಕ್ಷಕ ಬಳಗದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here