ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಿದಾಗ ದೇಶ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಸರಕಾರಿ ಶಾಲೆಗಳ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1ರಲ್ಲಿ ಲೋಕೋಪಯೋಗಿ ಇಲಾಖೆಯ 2022/23ನೇ ಸಾಲಿನ ವಿವೇಕ ಶಾಲಾ ಯೋಜನೆಯಡಿ ನಿರ್ಮಾಣವಾದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕ ವೃಂದವಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಜೊತೆಯಲ್ಲಿ ಪ್ರತಿಯೊಂದು ಮಗು ಶಿಕ್ಷಣದಿಂದ ವಚಿಚಿತವಾಗಬಾರದೆಂದು ಸರಕಾರ ಕ್ಷೀರಭಾಗ್ಯ, ಮದ್ಯಾಹ್ನದ ಬಿಸಿ ಊಟ, ಪೌಷ್ಟಿಕಯುಕ್ತ ಪೂರಕ ಆಹಾರ, ಸಮವಸ್ತç, ಶೂ ಭಾಗ್ಯಗಳನ್ನು ನೀಡುತ್ತಿದೆ.
ಈಗಾಗಲೇ ಸರಕಾರ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ರಾಜ್ಯಾದ್ಯಂತ ಶಿಥಿಲ ಕೊಠಡಿಗಳನ್ನು ಗುರುತಿಸಿ ದುರಸ್ತಿ ಕಾರ್ಯ ಮಾಡುತ್ತಿದೆ ಎಂದರು.
ಪ.ಪಂ ಅಧ್ಯಕ್ಷರಾದ ಯಲ್ಲವ್ವ ಕವಲೂರ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ ಶೇಖ, ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಕೆ.ಎಲ್. ಕರಿಗೌಡರ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಡಿಡಿಪಿಐ ಆರ್.ಎಸ್. ಬುರಡಿ, ಬಿಇಓ ವಿ.ವಿ. ನಡುವಿನಮನಿ, ಶಂಕರ ಹಡಗಲಿ, ಅನಿಲ ಜಾಧಾವ, ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಜಿ.ಎಂ. ಗಾಡಿ, ಮಂಜುನಾಥ ಗುಂಜಳ, ಬಿ.ಎಲ್. ಜಾಧಾವ, ರಮೇಶ ಮ್ಯಾಗೇರಿ, ಶಿವಪ್ಪ ಮಡ್ಡಿ, ಮಾರುತಿ ಜಾಧಾವ ಇದ್ದರು.