ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಳಗುಂದ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಥಿಲ ಕೊಠಡಿಗಳ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಅವರು ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡಿ, ಶಾಸಕರ ವಿಶೇಷ ಅಭಿವೃದ್ಧಿ ಅನುದಾನದಡಿ 5 ಲಕ್ಷ ರೂಪಾಯಿ ಅನುದಾನದಲ್ಲಿನಿರ್ಮಾಣಗೊಳ್ಳುತ್ತಿರುವ ಶಾಲಾ ಕೊಠಡಿ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿ, ಗದಗ ಗ್ರಾಮೀಣ ವ್ಯಾಪ್ತಿಯ ಶಿಥಿಲ ಕೊಠಡಿಗಳ ಮಾಹಿತಿನ್ನು ಈಗಾಗಲೇ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅನುದಾನ ಬಂದ ತಕ್ಷಣ ಎಲ್ಲಾ ಕೊಠಡಿಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಸಿಆರ್‌ಪಿ ಎಂ.ಎಂ. ನಿಂಬನಾಯ್ಕರ್, ಪ್ರಧಾನ ಗುರು ಸಂಗಮೇಶ ತಮ್ಮನಗೌಡರ, ಪಿ.ಬಿ. ಕೆಂಚನಗೌಡರ, ಪಿ.ಎಸ್. ಮರಿದೇವರಮಠ, ಎಸ್‌ಡಿಎಂಸಿ ಅಧ್ಯಕ್ಷ ಮಾಹಾಂತೇಶ ಕಣವಿ ಇದ್ದರು.



