ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ನಿರಂತರವಾಗಿ ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ಭಕ್ತರ ಮನವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಾಧ್ಯವೆಂದು ಸೋಮರಾಜು ಭಜನಾ ತಂಡದ ಮುಖ್ಯಸ್ಥ ಸೋಮಣ್ಣ ತಿಳಿಸಿದರು.
ಪಟ್ಟಣದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಡಗಲಿ ತಾಲೂಕಿನ ಸೋಮರಾಜು ಅವರ ಅಲ್ಲಿಪುರ ಹನುಮಾನ್ ಚಾಲೀಸ್ ತಂಡ ಬುಧವಾರ ಗಣಪತಿ, ಆಂಜನೇಯ, ಶಿವನಿಗೆ ಅಭಿಷೇಕದೊಂದಿಗೆ ಭಜನೆ ಪ್ರಾರಂಭಿಸಿ, ದಿನವಿಡೀ ರಾಮಜಪ, ಹನುಮಾನ್ ಚಾಲೀಸ್ ಪಠಣವನ್ನು ಕೈಗೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಳೆದ 51 ತಿಂಗಳಿಂದ ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳು ಸೋಮರಾಜು ಅವರ ಭಜನಾ ತಂಡ ರಾಜ್ಯದ ಒಂದು ಆಂಜನೇಯಸ್ವಾಮಿ ದೇವಸ್ಥಾನವನ್ನು ಆಯ್ಕೆ ಮಾಡಿಕೊಂಡು, ರಾತ್ರಿ ಅಲ್ಲಿಯೇ ತಂಗಿ ಬೆಳಿಗ್ಗೆ 5 ಗಂಟೆಯಿಂದ ದೇವಸ್ಥಾನದಲ್ಲಿ ಭಜನೆಯೊಂದಿಗೆ ಸ್ಥಳೀಯ ಭಕ್ತರನ್ನೂ ಭಜನೆ, ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಾರೆ. ದೇವರ ನಾಮ ಸ್ಮರಣೆಯೊಂದಿಗೆ ಆತ್ಮಸ್ಥೈರ್ಯ ವೃದ್ಧಿಸಲು ಪ್ರೇರಣೆ ನೀಡುತ್ತಾ ತಮ್ಮ ಸಂಕಲ್ಪದೊಂದಿಗೆ ಭಕ್ತರೂ ಪಾಲ್ಗೊಳಲ್ಲಿ ಎನ್ನುತ್ತಾರೆ ಸೋಮಣ್ಣ.