• About
  • Advertise
  • Privacy & Policy
  • Contact
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
No Result
View All Result
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Uncategorized

ಸೇವಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಬಿ.ಎಸ್. ಗೌಡರ

News Desk by News Desk
May 27, 2024
in Uncategorized
0
Rehabilitation training camp
0
SHARES
0
VIEWS
Share on FacebookShare on Twitter

ವಿಜಯಸಾಕ್ಷಿ ಸುದ್ದಿ, ನರೇಗಲ್ : ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಕಡ್ಡಾಯವಾಗಿ ಸಂಸ್ಥೆಯ ನಿಯಮಾವಳಿಗಳನ್ನು ಪಾಲಿಸಬೇಕು. ಏಕೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವ ಅಧಿಕಾರವು ಸಂಸ್ಥೆಗಳಿಗೆ ಇರುವುದರಿಂದ ಆ ಸಂಸ್ಥೆಗಳೆ ನೌಕರರ ನೇಮಕಾತಿ ಪ್ರಾಧಿಕಾರಿಗಳಾಗಿರುತ್ತವೆ. ಆದ್ದರಿಂದ ಸಂಸ್ಥೆಗಳು ರೂಪಿಸುವ ನಿಯಮಗಳಿಗೆ ಅಲ್ಲಿನ ನೌಕರರು ನಿಷ್ಠೆಯಿಂದ ಇರುವುದು ಅವಶ್ಯಕ ಎಂದು ಪ.ಪೂ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಿ.ಎಸ್. ಗೌಡರ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಮೂರು ದಿನಗಳ ಪುನಶ್ಚೇತನ ತರಬೇತಿ ಶಿಬಿರದ 3ನೇ ದಿನ ಅವರು `ಅನುದಾನಿತ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು ಹಾಗೂ ನೌಕರರ ಜವಾಬ್ದಾರಿಗಳು’ ವಿಷಯದ ಕುರಿತು ಮಾತನಾಡಿದರು.

ಸಂಸ್ಥೆ ರೂಪಿಸಿದ ನಿಯಮಾವಳಿಗಳಿಗೆ ಅನುಗುಣವಾಗಿ ಅಲ್ಲಿ ಆಯ್ಕೆಯಾದ ಸಿಬ್ಬಂದಿ ತಮ್ಮ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲಿನ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಆ ನೌಕರನ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಂಸ್ಥೆಗೆ ಅಧಿಕಾರವಿದ್ದು, ಇಲಾಖೆಯೊಂದಿಗೆ ಸಮಾಲೋಚಿಸಿ ನೌಕರನ ಮೇಲೆ ಸಂಸ್ಥೆ ಕ್ರಮ ಜರುಗಿಸಬಹುದಾಗಿದೆ. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಗೌಡರ ಹೇಳಿದರು.

ನಾನು ಹೇಗೂ ನೌಕರಿ ಪಡೆದಿದ್ದೇನೆ. ಅದಕ್ಕೆ ಇಲಾಖೆಯ ಅನುಮತಿ ದೊರಕಿದೆ. ಇನ್ನು ನನ್ನನ್ನು ಕೇಳುವವರು ಯಾರೂ ಇಲ್ಲ ಎಂಬ ರೀತಿಯಲ್ಲಿ ನೌಕರನು ವರ್ತಿಸಬಾರದು. ಅವನ ವರ್ತನೆ ಸರಿಯಿಲ್ಲ ಎಂದು ಸಂಸ್ಥೆಗೆ ಅನ್ನಿಸಿದರೆ ಅವರು ನೋಟೀಸ್ ನೀಡಿ ಎಚ್ಚರಿಕೆ ನೀಡಬಹುದು. ಅದಕ್ಕೂ ಜಗ್ಗದಿದ್ದರೆ ಮುಂದಿನ ಕಾನೂನು ಕ್ರಮಕ್ಕೂ ಹೋಗಲು ಸಂಸ್ಥೆಗೆ ಅಧಿಕಾರವಿದೆ. ಆದ್ದರಿಂದ ನೌಕರನು ತನ್ನನ್ನು ನೇಮಕ ಮಾಡಿಕೊಂಡ ಸಂಸ್ಥೆಗೆ ಎಂದಿಗೂ ವಿಧೇಯನಾಗಿರಬೇಕು. ಖಾಸಗಿ ಸಂಸ್ಥೆಗಳ ನಿಯಮಗಳ ಜೊತೆಗೆ ನೌಕರನು ಸರಕಾರದ ಕೆಸಿಎಸ್‌ಆರ್ ನಿಯಮಗಳನ್ನೂ ಸಹ ಪಾಲಿಸವುದು ಅವಶ್ಯಕವಾಗಿದೆ ಎಂದು ಗೌಡರ ಹೇಳಿದರು.

ನಂತರ ಅವರು ನೌಕರನು ಮಾಡುವ ಯಾವ ಯಾವ ಅಪರಾಧಗಳಿಗೆ ಯಾವ ಯಾವ ಕಾನೂನು ಕ್ರಮಗಳಿವೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.

ವೇದಿಕೆಯ ಮೇಲೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ, ನಿವೃತ್ತ ಪ್ರಾಚಾರ್ಯ ಬಿ.ಎಫ್. ಚೇಗರೆಡ್ಡಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ನಿರೂಪಿಸಿದರು. ಮುಖ್ಯ ಶಿಕ್ಷಕ ಸಜ್ಜನ ಪರಿಚಯಿಸಿದರು. ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ವಂದಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ವೇತನವನ್ನೇನೋ ಸರಕಾರ ನೀಡುತ್ತದೆ. ಅದನ್ನು ಅನುದಾನವೆಂದು ಕರೆಯಲಾಗುತ್ತದೆ. ಈ ಅನುದಾನವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ನೀಡುತ್ತಿದ್ದು, ಅಲ್ಲಿನ ನೌಕರರ ನಡವಳಿಕೆಯ ನಿಯಮಾವಳಿಗಳನ್ನು ಆಯಾ ಸಂಸ್ಥೆಗಳೇ ರೂಪಿಸಬೇಕಾಗುತ್ತದೆ. ಹೀಗೆ ತಮಗೆ ಅನುಕೂಲಕರ ನಿಯಮಗಳನ್ನು ರೂಪಿಸಿ ನೌಕರರನ್ನು ದುಡಿಸಿಕೊಳ್ಳುವ ಜವಾಬ್ದಾರಿ ಆಯಾ ಸಂಸ್ಥೆಗಳದ್ದೇ ಆಗಿರುತ್ತದೆ ಎಂದು ಬಿ.ಎಸ್. ಗೌಡರ ಮಾಹಿತಿ ನೀಡಿದರು.

Tags: ``Rules and Responsibilities of Employees of Aided Educational Institutions''gadaganewsLatestNewsnaregalRetired Joint Director of Education Department B.S. Gowdaupdatenews
Previous Post

ಬುದ್ಧ, ಬಸವ, ಅಂಬೇಡ್ಕರ್ ಮಹಾಮಾನವತಾವಾದಿಗಳು

Next Post

ಸ್ವಚ್ಛತೆ, ಆರೋಗ್ಯ ರಕ್ಷಣೆಗೆ ಗಮನ ನೀಡಿ : ವೈಶಾಲಿ ಎಂ.ಎಲ್

News Desk

News Desk

Next Post
District Disaster Management Authority meeting

ಸ್ವಚ್ಛತೆ, ಆರೋಗ್ಯ ರಕ್ಷಣೆಗೆ ಗಮನ ನೀಡಿ : ವೈಶಾಲಿ ಎಂ.ಎಲ್

Leave a Reply Cancel reply

Your email address will not be published. Required fields are marked *

Stay Connected test

  • 24k Followers
  • 99 Subscribers
  • Trending
  • Comments
  • Latest
ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

October 21, 2026
Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

October 21, 2026

ಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

October 18, 2026

ದಸರಾ ಹಬ್ಬದ ದಿನವೇ ಖಾಸಗಿ ಶಾಲಾ ಶಿಕ್ಷಕಿ ಸಾವು! ತುಂಗಭದ್ರಾ ಹಿನ್ನೀರಿನಲ್ಲಿ ಮೃತದೇಹ ಪತ್ತೆ

October 20, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ವಿಜಯದಶಮಿ ದಿನವೇ ಪತ್ನಿಯ ಕೊಲೆ: ಬೆಳಗಾವಿಯಲ್ಲಿ ಪತಿ ಪೊಲೀಸ್ ವಶಕ್ಕೆ!

ವಿಜಯದಶಮಿ ದಿನವೇ ಪತ್ನಿಯ ಕೊಲೆ: ಬೆಳಗಾವಿಯಲ್ಲಿ ಪತಿ ಪೊಲೀಸ್ ವಶಕ್ಕೆ!

October 22, 2026
ಬೆಂಗಳೂರಿನ RTO ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ? ನಿವೃತ್ತ ನೌಕರರ ವಿರುದ್ಧ ಗಂಭೀರ ಆರೋಪ

ಬೆಂಗಳೂರಿನ RTO ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ? ನಿವೃತ್ತ ನೌಕರರ ವಿರುದ್ಧ ಗಂಭೀರ ಆರೋಪ

October 22, 2026
ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೆ ಇಬ್ಬರು ಅರೆಸ್ಟ್!

ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೆ ಇಬ್ಬರು ಅರೆಸ್ಟ್!

October 22, 2026
ಶಿವಮೊಗ್ಗ ದಸರಾ ಆನೆ ಬೆದರಿದ ಘಟನೆ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ: ಮುಂದಿನ ವರ್ಷದಿಂದ ಕಡ್ಡಾಯ ತಾಲೀಮು!

ಶಿವಮೊಗ್ಗ ದಸರಾ ಆನೆ ಬೆದರಿದ ಘಟನೆ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ: ಮುಂದಿನ ವರ್ಷದಿಂದ ಕಡ್ಡಾಯ ತಾಲೀಮು!

October 21, 2026

Recent News

Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ವಿಜಯದಶಮಿ ದಿನವೇ ಪತ್ನಿಯ ಕೊಲೆ: ಬೆಳಗಾವಿಯಲ್ಲಿ ಪತಿ ಪೊಲೀಸ್ ವಶಕ್ಕೆ!

ವಿಜಯದಶಮಿ ದಿನವೇ ಪತ್ನಿಯ ಕೊಲೆ: ಬೆಳಗಾವಿಯಲ್ಲಿ ಪತಿ ಪೊಲೀಸ್ ವಶಕ್ಕೆ!

October 22, 2026
ಬೆಂಗಳೂರಿನ RTO ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ? ನಿವೃತ್ತ ನೌಕರರ ವಿರುದ್ಧ ಗಂಭೀರ ಆರೋಪ

ಬೆಂಗಳೂರಿನ RTO ಕಚೇರಿಗಳಲ್ಲಿ ಬ್ರೋಕರ್‌ಗಳ ಹಾವಳಿ? ನಿವೃತ್ತ ನೌಕರರ ವಿರುದ್ಧ ಗಂಭೀರ ಆರೋಪ

October 22, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
Join WhatsApp Read E-Paper