ಸಾಧಕ ವಿದ್ಯಾರ್ಥಿಗಳಿಗೆ ಬ್ರಾಹ್ಮಣ ಸಂಘದಿಂದ ಸನ್ಮಾನ ಕಾರ್ಯಕ್ರಮ

0
Student talent award on June 16 by Zilla Brahmin Sangh
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಗದಗ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಜೂನ್ 16ರಂದು ಬೆಳಿಗ್ಗೆ 10.30ಕ್ಕೆ ಗದುಗಿನ ಶ್ರೀ ವೀರನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲೆಯ ಪ್ರತಿಭಾವಂತ ಬ್ರಾಹ್ಮಣ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಲಿದೆ ಎಂದು ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.

Advertisement

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಬ್ರಹ್ಮ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 60 ಮತ್ತು ಅದಕ್ಕಿಂತಲೂ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಗುವುದು. ಆಯಾ ತಾಲೂಕಿನ ಬ್ರಾಹ್ಮಣ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಮಕ್ಕಳ ವಿವರಗಳನ್ನು ಅವರ ಬಳಿ ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ನಾಡಿನ ಖ್ಯಾತ ನಗೆ ಭಾಷಣಕಾರರಾದ ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ ಅವರನ್ನು ಆಮಂತ್ರಿಸುವ ವಿಚಾರವಿದ್ದು, ಆ ಕಾರ್ಯ ಪ್ರಗತಿಯಲ್ಲಿದೆ. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಬ್ರಾಹ್ಮಣ ಸಂಘವು ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ಸಂಘದ ದ್ವಿತೀಯ ವಾರ್ಷಿಕೋತ್ಸವವನ್ನೂ ಆಚರಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳಲ್ಲಿ ನರೇಗಲ್ಲ ಬ್ರಹ್ಮ ಸಮಾಜದ ಸರ್ವ ಬಂಧು-ಭಗಿನಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ ತೆಂಬದಮನಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಗೆ ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮಾತನಾಡಿ, ಗದಗ ಜಿಲ್ಲಾ ಸಂಘದಿಂದ ನಡೆಯುವ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನರೇಗಲ್ಲ ಬ್ರಹ್ಮ ಸಮಾಜದವರೆಲ್ಲರೂ ಸಹಕಾರ ನೀಡುತ್ತೇವೆಂದರು.

ವೇದಿಕೆಯ ಮೇಲೆ ಅರ್ಚಕರಾದ ಶ್ರೀವಲ್ಲಭಭಟ್ಟ ಸದರಜೋಷಿ, ಜಿಲ್ಲಾ ಉಪಾಧ್ಯಕ್ಷ ಪ್ರಾಣೇಶ್ ಕುಲಕರ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್.ಎಚ್. ಕುಲಕರ್ಣಿ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಅನಂತ ಕುಲಕರ್ಣಿ, ನಾಗರಾಜ ಗ್ರಾಮಪುರೋಹಿತ, ಅರುಣ ಕುಲಕರ್ಣಿ, ಭಾರತಿ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ಅರ್ಚನಾ ಕುಲಕರ್ಣಿ, ಅನಿತಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಲಕ್ಷಿö್ಮ ಗ್ರಾಮಪುರೋಹಿತ, ವಿದ್ಯಾ ಗ್ರಾಮಪುರೋಹಿತ, ರೂಪಾ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ರಾಜಶ್ರೀ ಕುಲಕರ್ಣಿ ಮುಂತಾದವರಿದ್ದರು.

ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾದ ವಿದ್ಯಾರ್ಥಿಗಳು/ಪಾಲಕರು ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ ವೆಂಕಟೇಶ ಕುಲಕರ್ಣಿ (ಮೊ.9448469595), ಪ್ರಧಾನ ಕಾರ್ಯದರ್ಶಿ ಅನಿಲ ತೆಂಬದಮನಿ (ಮೊ.9945524136) ಕೃಷ್ಣ ನಾಡಿಗೇರ (ಮೊ.9343520581), ನರೇಗಲ್ಲ ಹೋಬಳಿ ಮಟ್ಟದಲ್ಲಿ ಡಾ. ನಾಗರಾಜ ಗ್ರಾಮಪುರೋಹಿತ(ಮೊ.9743010359), ಆದರ್ಶ ಕುಲಕರ್ಣಿ (ಮೊ.9663272575), ರಘುನಾಥ ಕೊಂಡಿ (ಮೊ.6364141716), ಎಸ್.ಎಚ್. ಕುಲಕರ್ಣಿ (ಮೊ.9916338080) ಮತ್ತು ಆನಂದ ಕುಲಕರ್ಣಿ (ಮೊ.9448344135) ಇವರನ್ನು ಸಂಪರ್ಕಿಸಿ, ಅರ್ಜಿಯೊಂದಿಗೆ ಅಂಕಪಟ್ಟಿ, ಶಾಲಾ ಬಿಡುಗಡೆ ಪ್ರಮಾಣ ಪತ್ರ (ಎಲ್.ಸಿ) ಮತ್ತು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಗಳೊಂದಿಗೆ ಜೂನ್ 8ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.


Spread the love

LEAVE A REPLY

Please enter your comment!
Please enter your name here