ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 57ನೇ ಜನ್ಮದಿನದ ಪ್ರಯುಕ್ತ ಕರವೇ ಗದಗ ಜಿಲ್ಲಾ ಗೌರವಾಧ್ಯಕ್ಷ ನಿಂಗನಗೌಡ ಮಾಲಿಪಾಟೀಲ ಇವರ ನೇತೃತ್ವದಲ್ಲಿ ನಗರದ ದುಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ ಮತ್ತು ಶಿವರತ್ನಾ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು-ಹಾಲು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು.
Advertisement
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ಸಚಿನ್ ಗಾಣಿಗೇರ, ಸಂಚಾಲಕ ಚೇತನ ಎಸ್.ಕಣವಿ, ಕರವೇ ಮುಖಂಡರಾದ ಆನಂದ ಹೊಸಮನಿ, ನಾಗಪ್ಪ ಅಣ್ಣಿಗೇರಿ, ತೌಸಿಪ್ ಡಾಲಾಯತ್, ಮಹಾದೇವಿ ದೊಡ್ಡಗೌಡ್ರ, ಯಲ್ಲಪ್ಪ ಭೋವಿ, ಈರಣ್ಣ ಹುರಕಡ್ಲಿ, ಬಕ್ಷಿರ್ಸಾಬ್ ನದಾಫ, ಸಂಗಮೇಶ ಅಂಗಡಿ, ಕಿರಣ ಭಾತಖಾನಿ, ಮಂಜುನಾಥ ನರೇಗಲ್ ಮುಂತಾದವರು ಉಪಸ್ಥಿತರಿದ್ದರು.