ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಖದ್ಮತ್ ಏ ಮಿಲ್ಲತ್ ಗ್ರೂಪ್ ವತಿಯಿಂದ ಹಿಜಾಬ್ ಹಾಗೂ ನೋಟ್ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ತಾಜುದ್ದೀನ್ ಕಿಂಡ್ರಿ, ಪ್ರತಿಭಾವಂತ ಮಕ್ಕಳಿಗೆ ಹಾಗೂ ಬಡ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಪೂರಕ ಕೊಡುಗೆಗಳನ್ನು ಕೊಟ್ಟರೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಬ್ದುಲ್ ಹಮೀದ ಮುಜಾವರ, ರಫೀಕ್ ದಲೀಲ, ಹೈದರಲಿ ಖವಾಸ, ರಾಜೇಸಾಬ ಸೈಯದಬಡೆ, ಚಮನಸಾಬ ಹಾದಿಮನಿ, ಮುನ್ನಾ ಢಾಲಾಯತ್, ದಾವೂದ, ಜಮಾಲ್ ಮಾಬುಲಿ ಕೂರ್ತಕೋಟಿ, ಜಾಫರ್ ಭದ್ರಾಪೂರ, ಇಸ್ಮಾಯಿಲ್ ಸುಂಕದ, ರಾಜೇಸಾಬ ಜಮಾಲಸಾಬನವರ, ಫಕ್ರುಸಾಬ ಹಾದಿಮನಿ, ಯೂಸುಫ್ ಶಿದ್ದಿ, ಇಬ್ರಾಹಿಂ ಹಣಗಿ, ಶಿಕ್ಷಕರಾದ ಎಸ್.ಎಂ. ಉಮರ್ಜಿ, ಲಮಾಣಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.



