‘ಲಿಲ್ಲಿ’ ಚಲನಚಿತ್ರದ ಟೀಸರ್ ಬಿಡುಗಡೆ

0
Teaser release of 'Lilly' movie
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಬೃಂದ ವಿದ್ಯಾ ಪಿಕ್ಚರ್ಸ್ ಬ್ಯಾನರ್‌ನ ಅಡಿಯಲ್ಲಿ ಹಗದೂರು ಅಶೋಕ್ ರೆಡ್ಡಿ, ಮುತ್ತುಸಂದ್ರ ವೆಂಕಟರಾಮ್ ಸತ್ಯವಾರ ನಾಗೇಶ್ ರವರು ಜಂಟಿಯಾಗಿ ನಿರ್ಮಿಸುತ್ತಿರುವ ‘ಲಿಲ್ಲಿ’ ಕನ್ನಡ ಚಲನಚಿತ್ರದ ಟೀಸರ್‌ನ್ನು ಹೊಸಕೋಟೆ ಯಾದವ ಮಹಾಸಭಾ ಅಧ್ಯಕ್ಷ ಆನಂದಪ್ಪನವರು ಲೋಕಾರ್ಪಣೆಗೊಳಿಸಿದರು.

Advertisement

ಸಿನಿಮಾ ನಿರ್ದೇಶಕನೊಬ್ಬನ ಜೀವನದಲ್ಲಿ ನಡೆಯುವ ಒಂದು ಘಟನೆ ಇಡೀ ಚಿತ್ರರಂಗವನ್ನು ಭಯಭೀತಿಗೊಳಿಸುವ ಕಥಾಹಂದರವಿರುವ ‘ಲಿಲ್ಲಿ’ ಚಿತ್ರದಲ್ಲಿ ಸುರೇಶ್ ಸೂರ್ಯ, ಖುಷಿಗೌಡ, ಅನು, ಅಶೋಕ್ ರೆಡ್ಡಿ, ಎಂ.ವಿ. ಸಮಯ್, ಚಂದ್ರಶೇಖರ್, ನಾಗೇಶ್, ಭಕ್ತರಹಳ್ಳಿ ರವಿ, ರಾಧಾ, ವೆಂಕಟರಾಮ್, ಬೇಬಿ ಜಯಲಲಿತ ಮೊದಲಾದವರು ನಟಿಸಿದ್ದಾರೆ.

ಆರ್.ಕೆ. ಗಾಂಧಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ‘ಲಿಲ್ಲಿ’ ಸಿನಿಮಾಗೆ ಅನಿರುದ್ಧ ಶಾಸ್ತ್ರೀ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಬಿ ಯುವರಾಜ್ ಛಾಯಾಗ್ರಹಣ, ಸಂಕಲನ, ಸೂರ್ಯಕಿರಣ್‌ರ ನೃತ್ಯ ಸಂಯೋಜನೆ ಇದ್ದು, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ ಅವರ ಪತ್ರಿಕಾ ಪ್ರಚಾರವಿದೆ. ಸದ್ಯ ಚಿತ್ರಕ್ಕೆ ಸಂಬAಧಿಸಿದ ಎಲ್ಲ ಕಾರ್ಯಗಳು ಭರದಿಂದ ಸಾಗಿದ್ದು, ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಿರ್ದೇಶಕ ಗಾಂಧಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here