ಅಧ್ಯಕ್ಷರಾಗಿ ಪುಲಕೇಶ ಉಪನಾಳ ಅವಿರೋಧ ಆಯ್ಕೆ

0
Someshwar Yarn Mill Management Board Election
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ 1981ರಲ್ಲಿ ಮಾಜಿ ಶಾಸಕ ದಿ.ಯಜಮಾನ್ ಗೂಳಪ್ಪ ಉಪನಾಳ ಅವರಿಂದ ಸ್ಥಾಪಿಸಲ್ಪಟ್ಟಿರುವ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ 2024ರಿಂದ 2029ರವರೆಗಿನ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ 18 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ನಿರ್ದೇಶಕರು ಬುಧವಾರ ಸಭೆ ಸೇರಿ, ನೂತನ ಅಧ್ಯಕ್ಷರಾಗಿ ಪುಲಕೇಶಿ ಉಪನಾಳ ಮತ್ತು ಉಪಾಧ್ಯಕ್ಷರಾಗಿ ಗುರುಸಿದ್ದಪ್ಪ ಬಸಪ್ಪ ಮೆಣಸಿನಕಾಯಿ ಅವಿರೋಧವಾಗಿ ಆಯ್ಕೆ ಮಾಡಿದರು.

Advertisement

ಗುರುಶಿದ್ದಪ್ಪ ಮೆಣಸಿನಕಾಯಿ, ಚನ್ನಪ್ಪ ಗುಂಜಾಳ, ನಿಂಗಪ್ಪ ರಗಟಿ, ನೀಲಪ್ಪ ಹತ್ತಿ, ಪುಲಿಕೇಶಿ ಉಪನಾಳ, ಬಸವರಾಜ ಸಾಸಲವಾಡ, ಮರುಳಾರಧ್ಯ ಕಳ್ಳಿಮಠ, ರಾಮಚಂದ್ರಸಾ ಬಾಕಳೆ, ರೇವತಿ ಉಪನಾಳ, ಶಂಕರಪ್ಪ ಗೊರವರ, ಶಿವಲಿಂಗಪ್ಪ ಬಳಿಗಾರ, ಶಿವಾನಂದ ಹತ್ತಿ, ಮೌಲಾಸಾಬ ಗುಡಾರದ, ಬಸವರಾಜ ಮುದಿಮಲ್ಲನವರ, ಶಿರೂರಪ್ಪ ಬಿಸನಳ್ಳಿ, ಬಸವರಾಜ ಕಳಸದ, ನಂದಾ ದರ್ಮಾಯತ್, ಪ್ರೇಮಕ್ಕ ಗಿಡಿಬಿಡಿ ಇವರು ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸತತ ನಾಲ್ಕನೇ ಅವಧಿಗೆ ಪುಲಿಕೇಶಿ ಗೂಳಪ್ಪ ಉಪನಾಳ ಮತ್ತು ಉಪಾಧ್ಯಕ್ಷರಾಗಿ ಗುರುಸಿದ್ದಪ್ಪ ಬಸಪ್ಪ ಮೆಣಸಿನಕಾಯಿ ಆಯ್ಕೆಯಾಗಿದ್ದು, ಗಿರಣಿಯ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗಿರಣಿಯ ಮಾಜಿ ಎಂಡಿ ಜೆ.ಕೋಟ್ರೇಶ, ಮಾಜಿ ನಿರ್ದೇಶಕರಾದ ಸೋಮೇಶ ಉಪನಾಳ, ರಾಮಪ್ಪ ನಾಗನೂರು, ಫಕ್ಕೀರಪ್ಪ ಗುಡಗೇರಿ, ಗಿರಣಿಯ ಸಿಬ್ಬಂದಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here