ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

0
Free coaching for competitive exams
Spread the love

ವಿಜಯಸಾಕ್ಷಿ ಸುದ್ದಿ, ರೋಣ : ರೋಣ ತಾಲೂಕು ಸೇರಿದಂತೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಎಸ್.ಆರ್. ಫೌಂಡೇಷನ್ ವತಿಯಿಂದ ಎರಡು ತಿಂಗಳವರೆಗೆ ನುರಿತ ಉಪನ್ಯಾಸಕರುಗಳಿಂದ ಐಎಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಉಚಿತ ತರಬೇತಿ ಕೇಂದ್ರವನ್ನು ರೋಣ ಆರ್‌ಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ತೆರಯಲಾಗಿದೆ.

Advertisement

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಂದ ಜೂನ್ 23ರಂದು ಬೆಳಿಗ್ಗೆ 11 ಗಂಟೆಗೆ ಉಚಿತ ತರಬೇತಿ ಕೇಂದ್ರವನ್ನು ವಿಜಯಪೂರ ಜಿಲ್ಲೆಯ ಚಾಣಕ್ಯ ಕರಿಯರ್ ಅಕಾಡಮಿ ಮುಖ್ಯಸ್ಥ ಎನ್.ಎಮ್. ಬಿರಾದಾರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣವರ, ಗಂಗಾಧರ ಪಿ.ಎಸ್, ಮಂಜುನಾಥ ಬಾಡಗಿ, ಸೋಮು ದುಂಡಿಗೇರಿ, ಗರಣಿ ಕೃಷ್ಣಮೂರ್ತಿ, ಆರ್.ವೆಂಕಟರಮಣಸ್ವಾಮಿ, ಡಾ. ಗುರುರಾಜ ಬುಲಬುಲೆ, ಸಿದ್ದಣ್ಣ ದಳವಾಯಿ, ಈಶ್ವರಗಿರಿ, ಶರಣಯ್ಯ ಬಂಡಾರಿಮಠ, ಆರ್.ಮಂಜುನಾಥ ಮುಂತಾದವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸಲಿದ್ದಾರೆ.

ಶಾಸಕ ಜಿ.ಎಸ್. ಪಾಟೀಲರವರ ಮುತುವರ್ಜಿಯಿಂದ ನಡೆಸಲಾಗುತ್ತಿರುವ ಉಚಿತ ತರಬೇತಿಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಪುಸ್ತಕಗಳನ್ನು ಸಹ ಉಚಿತವಾಗಿ ಒದಗಿಸಲಾಗುವುದು. ಅಶೋಕ ಮಿರ್ಜಿ, ಮಂಜುನಾಥ ಬಿ, ಹುಸೇನಪ್ಪ ನಾಯ್ಕರವರಿಂದ ಉಪನ್ಯಾಸ ಒದಗಿಸಲು ಎಸ್.ಆರ್. ಪಾಟೀಲ ಫೌಂಡೇಷೇನ್ ಸಿದ್ಧತೆ ಮಾಡಿಕೊಂಡಿದೆ.


Spread the love

LEAVE A REPLY

Please enter your comment!
Please enter your name here